ಒತ್ತಾಯದ ಮತಾಂತರ ಇಲ್ಲ: ಪಾಕ್‌ ಕೋರ್ಟ್‌

ಶುಕ್ರವಾರ, ಏಪ್ರಿಲ್ 19, 2019
22 °C

ಒತ್ತಾಯದ ಮತಾಂತರ ಇಲ್ಲ: ಪಾಕ್‌ ಕೋರ್ಟ್‌

Published:
Updated:

ಇಸ್ಲಾಮಾಬಾದ್‌: ಇಬ್ಬರು ಹಿಂದೂ ಬಾಲಕಿಯರನ್ನು ಒತ್ತಾಯದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಲ್ಲ ಎಂದು ಹೇಳಿರುವ ಇಸ್ಲಾಮಾಬಾದ್‌ ಹೈಕೋರ್ಟ್‌, ಬಾಲಕಿಯರು ತಮ್ಮ ಪತಿಯೊಂದಿಗೆ ಜೀವಿಸಲು ಅನುಮತಿ ನೀಡಿದೆ.

ಇಬ್ಬರು ಬಾಲಕಿಯರನ್ನು ಅಪಹರಿಸಿ, ಒತ್ತಾಯದಿಂದ ಮತಾಂತರಗೊಳಿಸಿ, ಮುಸ್ಲಿಂ ಯುವಕರೊಂದಿಗೆ ಮದುವೆ ಮಾಡಲಾಗಿದೆ ಎಂದು ಬಾಲಕಿಯರ ತಂದೆ ಹಾಗೂ ಸಹೋದರರು ಮಾರ್ಚ್‌ 25ರಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿ, ವರದಿ ಸಲ್ಲಿಸಲು ಮುಖ್ಯ ನ್ಯಾಯಮೂರ್ತಿ ಅಥಾರ್‌ ಮಿನಾಲ್ಲಹ್‌ ಐವರು ಸದಸ್ಯರನ್ನು ಒಳಗೊಂಡ ಆಯೋಗವೊಂದನ್ನು 
ರಚಿಸಿದ್ದರು.

ತನಿಖೆ ನಡೆಸಿದ್ದ ಆಯೋಗ, ‘ಬಾಲಕಿಯರನ್ನು ಒತ್ತಾಯದಿಂದ ಮತಾಂತರ ಮಾಡಿಲ್ಲ’ ಎಂದು ವರದಿ ನೀಡಿತ್ತು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !