ಶನಿವಾರ, ಡಿಸೆಂಬರ್ 14, 2019
23 °C

ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ ನವಾಜ್ ಷರೀಫ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ಮೂಲಕ ಮಂಗಳವಾರ ಲಂಡನ್‌ಗೆ ತೆರಳಿದ್ದಾರೆ. 

ಷರೀಫ್‌ ಅವರಿಗೆ ವಿದೇಶಕ್ಕೆ ತೆರಳಲು ಲಾಹೋರ್‌ ಹೈಕೋರ್ಟ್‌ ನಾಲ್ಕು ವಾರಗಳ ಅನುಮತಿ ನೀಡಿದೆ. 

ಷರೀಫ್‌ ಜೊತೆ ಅವರ ಕಿರಿಯ ಸಹೋದರ ಶಹಬಾಜ್‌ ಷರೀಫ್‌ ಮತ್ತು ಅವರ ಖಾಸಗಿ ವೈದ್ಯ ಅದ್ನಾನ್‌ ಖಾನ್‌ ಇದ್ದಾರೆ. ದೋಹಾದಿಂದ ಬಂದ ಉನ್ನತ ಗುಣಮಟ್ಟದ ಏರ್ ಆಂಬುಲೆನ್ಸ್‌ನಲ್ಲಿ ಅವರು ಕತಾರ್ ಮೂಲಕ ಲಂಡನ್‌ಗೆ ತೆರಳಿದರು.

ಏರ್ ಆಂಬುಲೆನ್ಸ್‌ನಲ್ಲಿ ತೀವ್ರ ನಿಗಾ ಘಟಕ ಮತ್ತು ಶಸ್ತ್ರಚಿಕಿತ್ಸೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ವೈದ್ಯರು ಮತ್ತು ಅರೆವೈದ್ಯರ ತಂಡವೂ ವಿಮಾನದಲ್ಲಿದೆ ಎಂದು ಷರೀಫ್‌ ಖಾಸಗಿ ವೈದ್ಯ ಖಾನ್‌ ಟ್ವೀಟ್‌ ಮಾಡಿದ್ದಾರೆ. 

ಷರೀಫ್‌ ಅವರನ್ನು ಲಂಡನ್‌ನ ಹರೇಲಿ ಸ್ಟ್ರೀಟ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಮುಸ್ಲಿಂ ಲೀಗ್‌ ವಕ್ತಾರ ಮರಿಯಂ ಔರಂಗಜೇಬ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು