182 ಮದರಸಾಗಳ ಮೇಲೆ ನಿಯಂತ್ರಣ, 100ಕ್ಕೂ ಹೆಚ್ಚು ಮಂದಿಯ ಬಂಧಿಸಿದ ಪಾಕ್

ಬುಧವಾರ, ಮಾರ್ಚ್ 27, 2019
26 °C
ಭಯೋತ್ಪಾದನಾ ಸಂಘಟನೆಗಳ ಮೇಲೆ ಶಿಸ್ತುಕ್ರಮ ಜಾರಿ

182 ಮದರಸಾಗಳ ಮೇಲೆ ನಿಯಂತ್ರಣ, 100ಕ್ಕೂ ಹೆಚ್ಚು ಮಂದಿಯ ಬಂಧಿಸಿದ ಪಾಕ್

Published:
Updated:

ಇಸ್ಲಾಮಾಬಾದ್: ಭಯೋತ್ಪಾದನಾ ಸಂಘಟನೆಗಳ ಮೇಲೆ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸುವ ಉದ್ದೇಶದಿಂದ ಪಾಕಿಸ್ತಾನವು 182 ಮದರಸಾಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ ಎಂದು ಆಂತರಿಕ ಸಚಿವಾಲಯ ಹೇಳಿದೆ. 

ಇದು ಬಹುಕಾಲದ ಯೋಜನೆ. ಭಾರತ ಹೇಳಿದ ಕಾರಣಕ್ಕೆ ನಾವು ಈ ಕ್ರಮ ಜರುಗಿಸಿಲ್ಲ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ. 

ಪುಲ್ವಾಮ ದಾಳಿಯ ಬಳಿಕ ಪಾಕ್‌ ಮೇಲೆ ಜೈಶ್‌–ಇ–ಮೊಹಮ್ಮದ್ ಭಯೋತ್ಪಾದನಾ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳನ್ನು ನಿಷೇಧಿಸುವಂತೆ ಜಾಗತಿಕ ಮಟ್ಟದಿಂದಲೂ ಒತ್ತಡ ಹೇರಲಾಗಿತ್ತು. 

ಇಲ್ಲಿನ ಪ್ರಾಂತೀಯ ಸರ್ಕಾರಗಳು ಈಗಾಗಲೇ 182 ಮದರಸಾಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇನ್ನು ಕಾನೂನು ಜಾರಿ ಸಂಸ್ಥೆಗಳು ಮುಂಜಾಗ್ರತಾ ಕ್ರಮವಾಗಿ 121 ಮಂದಿಯನ್ನು ಬಂಧಿಸಲಾಗಿದೆ ಎಂದು ಪಾಕ್‌ನ ಆಂತರಿಕ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಇದೀಗ ನಿಯಂತ್ರಣಕ್ಕೆ ತೆಗೆದುಕೊಂಡ ಬಹುತೇಕ ಸಂಸ್ಥೆಗಳು ಜೈಶ್‌–ಇ–ಮಹಮ್ಮದ್ ಸಂಘಟನೆಗೆ ಸೇರಿದವುಗಳಾಗಿವೆ. ಅಲ್ಲದೇ ಪಾಕ್‌ನಲ್ಲಿ 300ಕ್ಕೂ ಹೆಚ್ಚು ಮದರಸಾಗಳನ್ನು ನಡೆಸುತ್ತಿರುವ ಮತ್ತೊಂದು ಧಾರ್ಮಿಕ ಸಂಘಟನೆ ಜಮತ್–ಉದ್–ದವಾ (ಜೆಯುಡಿ), ಜೊತೆಗೆ 34 ಶಾಲೆಗಳು, ಕಾಲೇಜುಗಳು, 163 ಔಷಧಾಲಯಗಳು, 184 ಆ್ಯಂಬುಲೆನ್ಸ್‌ಗಳು, 5 ಆಸ್ಪತ್ರೆಗಳನ್ನು ಕೂಡ ನಿಯಂತ್ರಣಕ್ಕೊಳಪಡಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !