ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರಲ್ಲಿ ಬಾಹ್ಯಾಕಾಶಕ್ಕೆ ಗಗನ ಯಾತ್ರಿ ಕಳುಹಿಸಲಿರುವ ಪಾಕ್‌

Last Updated 16 ಸೆಪ್ಟೆಂಬರ್ 2019, 20:35 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಚೀನಾದ ನೆರವಿನೊಂದಿಗೆ ಪಾಕಿಸ್ತಾನವು 2022ರ ವೇಳೆಗೆ ಮೊದಲ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹೇಳಿದ್ದಾರೆ.

ಗಗನಯಾತ್ರಿಯ ಆಯ್ಕೆ ಪ್ರಕ್ರಿಯೆ 2020ರಲ್ಲಿ ಆರಂಭವಾಗಲಿದೆ ಎಂದು ಸಚಿವ ಚೌಧುರಿ ಫವಾದ್‌ ಹುಸೇನ್‌ ಭಾನುವಾರ ಹೇಳಿದ್ದಾರೆ.

ಈ ಬಾಹ್ಯಾಕಾಶ ಯೋಜನೆಯಲ್ಲಿ ಪಾಕ್‌ ಜೊತೆ ಚೀನಾ ಕೈ ಜೋಡಿಸಲಿದೆ. ಆರಂಭದಲ್ಲಿ 50 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. 2022ರ ವೇಳೆಗೆ 25 ಮಂದಿಯ ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು. ಇವರ ಪೈಕಿ ಒಬ್ಬರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ವಾಯುಪಡೆಯು ಪ್ರಧಾನ ಪಾತ್ರ ವಹಿಸಲಿದೆ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಕಿಸ್ತಾನ ಮತ್ತು ಭಾರತವು ಜೊತೆಯಾಗಿ ಕೆಲಸ ಮಾಡಿದಲ್ಲಿ ಎರಡೂ ದೇಶಗಳಿಗೆ ಒಳಿತಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸೋವಿಯತ್‌ ಒಕ್ಕೂಟ 1963ರಲ್ಲಿ ಬಾಹ್ಯಾಕಾಶಕ್ಕೆ ತನ್ನ ರಾಕೆಟ್‌ ಕಳುಹಿಸಿದ ಬಳಿಕ ಬಾಹ್ಯಾಕಾಶಕ್ಕೆ ಈ ರೀತಿ ಗಗನಯಾತ್ರಿಯನ್ನು ಕಳುಹಿಸುತ್ತಿರುವ ಏಷ್ಯಾದ ಎರಡನೇ ದೇಶ ಪಾಕಿಸ್ತಾನ ಎನಿಸಿಕೊಳ್ಳಲಿದೆ. ಬಾಹ್ಯಾಕಾಶ ವಿಜ್ಞಾನದ ಬೆಳವಣಿಗೆಯಲ್ಲಿ ‘ಪಾಕಿಸ್ತಾನ ಬಾಹ್ಯಾಕಾಶ ವಿಜ್ಞಾನ ಶಿಕ್ಷಣ ಕೇಂದ್ರ’ವು ಪ್ರಧಾನ ಪಾತ್ರ ವಹಿಸಲಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT