ಭಾರತ ದಾಳಿ ನಡೆಸುವ ಸಾಧ್ಯತೆ ಇದೆ, ಅಭಿನಂದನ್‍ ಬಿಡುಗಡೆ ವಿರೋಧಿಸಿದ ಪಾಕ್ ಸಚಿವ

ಬುಧವಾರ, ಮಾರ್ಚ್ 27, 2019
22 °C

ಭಾರತ ದಾಳಿ ನಡೆಸುವ ಸಾಧ್ಯತೆ ಇದೆ, ಅಭಿನಂದನ್‍ ಬಿಡುಗಡೆ ವಿರೋಧಿಸಿದ ಪಾಕ್ ಸಚಿವ

Published:
Updated:

ಇಸ್ಲಾಮಬಾದ್: ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ನ ಬಿಡುಗಡೆಗೆ ಪಾಕಿಸ್ತಾನದ ಸಚಿವರೊಬ್ಬರು ವಿರೋಧ ಸೂಚಿಸಿದ್ದಾರೆ. ಅಭಿನಂದನ್ ಭಾರತಕ್ಕೆ ತಲುಪಿದ ನಂತರ ಭಾರತ ಪಾಕ್ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಪಾಕ್ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.

ಗುರುವಾರ ಪಾಕಿಸ್ತಾನದ ಸಂಸತ್‍ನಲ್ಲಿ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವಾಮಿ ಮುಸ್ಲಿಂ ಲೀಗ್ ಮುಖಂಡ, ಸಚಿವ ಅಹ್ಮದ್ ಪಾಕಿಸ್ತಾನದ ಖೈಬರ್- ಪಖ್ತುನ್‍ಖಾವ ಪ್ರದೇಶದಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಮಾಜಿ ಪ್ರಧಾನಿ ವಾಜಪೇಯಿ ಅವರ ಅಧಿಕಾರವಧಿಯಲ್ಲಿ ಈ ರೀತಿಯ ಪರಿಸ್ಥಿತಿ ಇರಲಿಲ್ಲ, ಆದರೆ ಮೋದಿಯವರ ಯೋಚನೆಗಳೇ ಬೇರೆ. ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೇ ಮೋದಿ ಈ ದಾಳಿ ನಡೆಸಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಭಾರತೀಯ ವಾಯುಪಡೆಯ ಪೈಲಟ್‍ನ್ನು ವಾಪಸ್ ಕಳುಹಿಸಿದ ನಂತರ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ? ನಾನೊಂದು ಮಾತು ಹೇಳಲಚ್ಚಿಸುತ್ತೇನೆ, ಮೋದಿ ಅಲ್ಲಿ ಕುಳಿತಿದ್ದಾರೆ. ಅವರು ನಾಳೆ ನಮ್ಮ ಮೇಲೆ ದಾಳಿ ಮಾಡಿದರೆ ಏನು ಮಾಡುವುದು? ಭಾರತದಲ್ಲಿ ನೆಲೆಸಿರುವ ಮುಸ್ಲಿಮರು ಪಾಕಿಸ್ತಾನದತ್ತ ನೋಡುತ್ತಿದ್ದಾರೆ ಎಂದಿದ್ದಾರೆ.
 ಕಾರ್ಗಿಲ್ ಯುದ್ಧದ ವೇಳೆ  ವಿಮಾನವೊಂದು ಪತನಗೊಂಡು ಪಾಕಿಸ್ತಾನದ ಕಡೆ ಬಿದ್ದಿತ್ತು. ಆದರೆ ಭಾರತದ ವಿಮಾನಗಳು ಕಾರ್ಗಿಲ್ ದಾಟಿರಲಿಲ್ಲ. ಆದರೆ ಈ ಬಾರಿ ಭಾರತದ 14 ವಿಮಾನಗಳು ಪಾಕಿಸ್ತಾನದ ಜಬ್ಬಾ ಪ್ರವೇಶಿಸಿವೆ. ಅಲ್ಲಿ ಅಜರ್ ಸಾಹೇಬ್‍ನ ಮದರಸಾ ಇದೆ. ಅಲ್ಲಿಯೇ ಮದರಸಾ ತಾಲೀಬಾನ್ ಇರುವುದು ಎಂದಿದ್ದಾರೆ.

ಫೆ. 14ರಂದು ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿ ಹೊಣೆಯನ್ನು ಜೈಷ್- ಎ- ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿದೆ.

ಅಹ್ಮದ್ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿ ಟ್ವೀಟಿಸಿದ ಪಾಕ್ ಪ್ರಜೆ ನವೀದ್ ಕಮ್ರಾನ್, ಶೇಖ್ ರಶೀದ್ ಅವರು ರಾಜೀನಾಮೆ ನೀಡಬೇಕು. ಪಾಕಿಸ್ತಾನದ ಮಾಹಿತಿಗಳನ್ನು ಈ ರೀತಿ ಬಹಿರಂಗ ಪಡಿಸಿರುವುದಕ್ಕೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 81

  Happy
 • 21

  Amused
 • 15

  Sad
 • 10

  Frustrated
 • 16

  Angry

Comments:

0 comments

Write the first review for this !