ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಸಿಪಿಇಸಿಎ ಅಧ್ಯಕ್ಷರಾಗಿ ಬಾಜ್ವಾ ನೇಮಕ

Last Updated 27 ನವೆಂಬರ್ 2019, 20:28 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಹೊಸದಾಗಿ ರಚನೆಯಾಗಿರುವ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಪ್ರಾಧಿಕಾರಕ್ಕೆ (ಸಿಪಿಇಸಿಎ) ಮೊದಲನೇ ಅಧ್ಯಕ್ಷರನ್ನಾಗಿ ನಿವೃತ್ತ ಲೆಫ್ಟಿನಂಟ್‌ ಜನರಲ್‌ ಅಸೀಂ ಸಲೀಂ ಬಾಜ್ವಾ ಅವರನ್ನು ಪಾಕಿಸ್ತಾನ ನೇಮಕ ಮಾಡಿದೆ.

ಬಹುಕೋಟಿ ವೆಚ್ಚದ ಈ ಆರ್ಥಿಕ ಕಾರಿಡಾರ್‌ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದಕ್ಕಾಗಿ ಪ್ರಾಧಿಕಾರ ರಚಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಯೋಜನೆ ಮತ್ತು ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಸಿಪಿಇಸಿಎ ಕಾರ್ಯನಿರ್ವಹಿಸಲಿದೆ. ಬಾಜ್ವಾ ಅವರನ್ನು ನಾಲ್ಕು ವರ್ಷಗಳ ಅವಧಿಗೆ ಮಂಗಳವಾರ ನೇಮಿಸಲಾಗಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಸಿಪಿಇಸಿಎ ರಚನೆಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಪ್ರಾಧಿಕಾರ ರಚಿಸುವ ಮೂಲಕ ಸರ್ಕಾರವು ಸಂಸದೀಯ ಸಮಿತಿಯ ಶಿಫಾರಸುಗಳನ್ನು ಉಲ್ಲಂಘಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT