ಮಂಗಳವಾರ, ಸೆಪ್ಟೆಂಬರ್ 24, 2019
29 °C

ಚಂದ್ರಯಾನ–2: ಪಾಕಿಸ್ತಾನ ಲೇವಡಿ

Published:
Updated:

ಚಂದ್ರಯಾನ–2ರ ವಿಕ್ರಮ್ ಲ್ಯಾಂಡರ್‌, ಭೂಕೇಂದ್ರದ ಜತೆ ಸಂಪರ್ಕ ಕಳೆದುಕೊಂಡಿದ್ದನ್ನು ಪಾಕಿಸ್ತಾನವು ಲೇವಡಿ ಮಾಡಿದೆ. ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಫವಾದ್ ಹುಸೇನ್ ಸರಣಿ ಟ್ವೀಟ್‌ ಮಾಡುವ ಮೂಲಕ ಚಂದ್ರಯಾನ–2ನ್ನು ಲೇವಡಿ ಮಾಡಿದ್ದಾರೆ.

‘ಸೋದರನೇ ಮಲಗಿಕೋ ಹೋಗು. ಚಂದ್ರನ ಮೇಲೆ ಇಳಿಯಬೇಕಿದ್ದ ಆಟಿಕೆ ಮುಂಬೈನಲ್ಲಿ ಬಂದು ಬಿದ್ದಿದೆ. ತಾನೇ ದೊಡ್ಡ ಬಾಹ್ಯಾಕಾಶ ವಿಜ್ಞಾನಿ ಎಂಬಂತೆ ಮೋದಿ ಭಾಷಣ ಮಾಡುತ್ತಿದ್ದಾರೆ. ಅವರು ರಾಜಕಾರಣಿಯಂತೆ ಮಾತನಾಡಬೇಕಿತ್ತಲ್ಲವೇ. ಬಡರಾಷ್ಟ್ರದ ₹ 900 ಕೋಟಿಯನ್ನು ವ್ಯರ್ಥಮಾಡಿದ್ದು ಏಕೆ ಎಂದು ಲೋಕಸಭೆಯು ಮೋದಿ ಅವರನ್ನು ಪ್ರಶ್ನಿಸಬೇಕು’ ಎಂದು ಫವಾದ್ ಟ್ವೀಟ್ ಮಾಡಿದ್ದಾರೆ.

‘ಪ್ರಿಯ ಎಂಡಿಯಾ (Endia); ಚಂದ್ರಯಾನದಂತಹ ಯೋಜನೆ ಮೇಲೆ ಹಣ ವ್ಯರ್ಥ ಮಾಡುವ ಬದಲು, ಅಭಿನಂದನ್ ಅವರಂತಹವರನ್ನು ಟೀ ಕುಡಿಯಲು ಪಾಕಿಸ್ತಾನಕ್ಕೆ ಕಳುಹಿಸುವ ಬದಲು ಬಡತನ ನಿರ್ಮೂಲನಯತ್ತ ಗಮನಹರಿಸಿ. ನಿಮ್ಮ ಕಾಶ್ಮೀರದ ದುಸ್ಸಾಹಸಕ್ಕೆ ನೀವು ಅತ್ಯಂತ ದೊಡ್ಡ ಬೆಲೆ ತೆರಲಿದ್ದೀರಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಲವು ಭಾರತೀಯರು ತೀರಾ ಖಾರವಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Post Comments (+)