ಶನಿವಾರ, ನವೆಂಬರ್ 23, 2019
23 °C

ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಹೊರಕ್ಕೆ: ಅಮೆರಿಕ ಘೋಷಣೆ

Published:
Updated:

ವಾಷಿಂಗ್ಟನ್‌: ಜಾಗತಿಕ ಹವಾಮಾನದಲ್ಲಿನ ಬದಲಾವಣೆಯನ್ನು ತಡೆಗಟ್ಟಲು ಬದ್ಧತೆ ಪ್ರದರ್ಶಿಸುವ ಸಂಬಂಧ 188 ದೇಶಗಳು ಸಹಿ ಹಾಕಿದ್ದ ಐತಿಹಾಸಿಕ ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಅಮೆರಿಕ ಹೊರ ಬಂದಿದೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಅಧಿಸೂಚನೆ ಹೊರಡಿಸುವ ಮೂಲಕ ಈ ಒಪ್ಪಂದ ಕುರಿತಂತೆ ಅಮೆರಿಕ ಕೈಗೊಂಡ ನಿರ್ಧಾರವನ್ನು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.

ಈ ಒಪ್ಪಂದದಿಂದ ಹೊರಬರುವುದಾಗಿ 2017ರ ಜೂನ್‌ 1ರಂದೇ ಟ್ರಂಪ್‌ ಘೋಷಿಸಿದ್ದರು. ಈ ಪ್ರಕ್ರಿಯೆಗೆ ಆಡಳಿತಾತ್ಮಕ ಅನುಮೋದನೆ ದೊರೆತು, ಅಧಿಸೂಚನೆ ಇದೀಗ ಹೊರಬಿದ್ದಿದೆ.

ಪ್ರತಿಕ್ರಿಯಿಸಿ (+)