ಸೋಮವಾರ, ನವೆಂಬರ್ 18, 2019
20 °C
ಅ. 30 ರಂದು ಪ್ರದರ್ಶನಕ್ಕೆ ಚಾಲನೆ

8 ಸಾವಿರ ವರ್ಷಗಳ ಹಿಂದಿನ, ವಿಶ್ವದ ಅತ್ಯಂತ ಪುರಾತನ ಹವಳ ಅಬುಧಾಬಿಯಲ್ಲಿ ಪತ್ತೆ

Published:
Updated:

ಅಬುಧಾಬಿ: 8 ಸಾವಿರ ವರ್ಷದಷ್ಟು ಹಳೆಯದು ಎನ್ನಲಾದ ಹವಳವೊಂದನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಇಲ್ಲಿನ ಪ್ಯಾರಿಸ್‌ ಮ್ಯೂಸಿಯಂನಲ್ಲಿ ಇದೇ 30ರಿಂದ ಇದನ್ನು ಸಾರ್ವಜನಿಕ  ಪ್ರದರ್ಶನಕ್ಕೆ ಇಡಲಾಗುವುದು.

‘ಸಂಯುಕ್ತ ಅರಬ್‌ ಸಂಸ್ಥಾನಗಳ (ಯುಎಇ) ರಾಜಧಾನಿ ಸಮೀಪ ಇರುವ ಮಾರವಾಹ್ ದ್ವೀಪದಲ್ಲಿ ಉತ್ಖನನ ನಡೆಸುತ್ತಿರುವಾಗ ಈ ಹವಳ ಪತ್ತೆಯಾಗಿದೆ. ಇದನ್ನು ಅಬುಧಾಬಿ ಪರ್ಲ್‌ ಎಂಬುದಾಗಿ ಕರೆಯಲಾಗುತ್ತಿದೆ’ ಎಂದು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಚೇರಮನ್‌ ಮೊಹಮದ್ ಅಲ್‌–ಮುವಬಾರಕ್‌ ತಿಳಿಸಿದ್ದಾರೆ.

‘ಕಾರ್ಬನ್‌ ಡೇಟಿಂಗ್ ತಂತ್ರಜ್ಞಾನ ಮೂಲಕ ಪರಿಶೀಲನೆ ನಡೆಸಿದಾಗ, ಈ ಹವಳ ಕ್ರಿಸ್ತ ಪೂರ್ವ 5,800–5,600ರ ನಿಯೊಲಿಥಿಕ್ ಅವಧಿಯದ್ದು ಎಂಬುದು ದೃಢಪಟ್ಟಿದೆ’ ಎಂದೂ ಅವರು ಹೇಳಿದ್ದಾರೆ.

‘ಅಬುಧಾಬಿ ಕರಾವಳಿಯಲ್ಲಿ ಇಂತಹ ಅಮೂಲ್ಯ ಹವಳಗಳು ಹೇರಳವಾಗಿ ಸಿಗುತ್ತಿದ್ದವು ಎಂಬ ಅಂಶವನ್ನು 16ನೇ ಶತಮಾನದಲ್ಲಿ ಈ ಭಾಗದಲ್ಲಿ ಸಂಚರಿಸಿದ್ದ ವೆನಿಸ್‌ ನಗರದ ವಜ್ರಾಭರಣ ವ್ಯಾಪಾರಿ ಗ್ಯಾಸ್ಪರೊ ಬಾಲ್ಬಿ ತನ್ನ ಕೃತಿಗಳಲ್ಲಿ ಉಲ್ಲೇಖಿಸಿದ್ದಾನೆ’ ಎಂದೂ ಇಲಾಖೆ ಹೇಳಿದೆ.

ಪ್ರತಿಕ್ರಿಯಿಸಿ (+)