ಶನಿವಾರ, ಜನವರಿ 25, 2020
28 °C

ಹವಾಯ್ ನೌಕಾ ನೆಲೆಯಲ್ಲಿ ಗುಂಡಿನ ದಾಳಿಗೆ ಮೂರು ಮಂದಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Pearl Harbour Naval Base

ಲಾಸ್ ಏಂಜಲೀಸ್:  ಹವಾಯ್ ಪರ್ಲ್ ಹಾರ್ಬರ್ ನೌಕಾ ನೆಲೆಯಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು ದಾಳಿ ನಡೆಸಿದ ವ್ಯಕ್ತಿ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ.

ಬುಧವಾರ ಮಧ್ಯಾಹ್ನ 2.30ಕ್ಕೆ  (ಸ್ಥಳೀಯ ಕಾಲಮಾನ) ಗುಂಡಿನ ದಾಳಿ ನಡೆದಿದ್ದು, ಹಲವು ಗಂಟೆಗಳ ಕಾಲ ನೌಕಾನೆಲೆಯನ್ನು ಬಂದ್ ಮಾಡಲಾಗಿತ್ತು.

ಕಂಪ್ಯೂಟರ್ ಮುಂದೆ  ಕೂತಿದ್ದಾಗ  ಗುಂಡಿನ ಸದ್ದು ಕೇಳಿ ಕಿಟಕಿ ಬಳಿ ಬಂದು ನೋಡಿದಾಗ ಮೂವರು ಕೆಳಗೆ ಬಿದ್ದಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

 ನೌಕಾದಳದ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬರು ಗುಂಡು ಹಾರಿಸಿದ ನಂತರ ತಲೆಗೆ ಗುಂಡಿಕ್ಕಿದ್ದನ್ನು ನೋಡಿದೆ ಎಂದು ಮತ್ತೊಬ್ಬ  ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಗುಂಡಿನ ದಾಳಿ ನಡೆಸಿದ ವ್ಯಕ್ತಿ ಅಮೆರಿಕದ ನಾವಿಕ ಎಂದು ನ್ಯೂಸ್ 18 ಸುದ್ದಿ ಮಾಡಿದೆ.
 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು