ಎಚ್4 ವೀಸಾ ರದ್ದತಿ ನಿರ್ಣಯ ಅಂತಿಮ ಇಲ್ಲ

ಗುರುವಾರ , ಜೂಲೈ 18, 2019
23 °C

ಎಚ್4 ವೀಸಾ ರದ್ದತಿ ನಿರ್ಣಯ ಅಂತಿಮ ಇಲ್ಲ

Published:
Updated:

ವಾಷಿಂಗ್ಟನ್: ‘ಎಚ್‌4 ವೀಸಾ ಹೊಂದಿರುವವರಿಗೆ ನೀಡಿರುವ ಉದ್ಯೋಗ ಅವಕಾಶಗಳನ್ನು ರದ್ದುಪಡಿಸುವ ಕುರಿತು ಟ್ರಂಪ್ ಆಡಳಿತ ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ. ಏಕೆಂದರೆ ಈ ನಿಟ್ಟಿನಲ್ಲಿ ನಿಯಮ ರೂಪಿಸುವ ಪ್ರಕ್ರಿಯೆ ಇನ್ನೂ ಬಾಕಿ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್‌ಸಿಐಎಸ್) ಉದ್ಯೋಗ ಆಧಾರಿತವಾದ ಎಲ್ಲಾ ವೀಸಾ ಯೋಜನೆಗಳನ್ನು ಪುನರ್‌ಪರಿಶೀಲಿಸುತ್ತಿದ್ದು, ಎಚ್4 ವೀಸಾ ಸಹ ಇದರಲ್ಲಿ ಸೇರಿದೆ ಎಂದು ಅವರು ತಿಳಿಸಿದ್ದಾರೆ. 

ಎಚ್‌1–ಬಿ ವೀಸಾ ಹೊಂದಿರುವವರ ಪತಿ/ಪತ್ನಿಯರಿಗೆ ಎಚ್‌4 ವೀಸಾ ನೀಡಲಾಗುತ್ತದೆ. ಒಬಾಮ ಆಡಳಿತದ ಅವಧಿಯಲ್ಲಿ, ಕೌಶಲ ಹೊಂದಿರುವ ಎಚ್‌4 ವೀಸಾದಾರರಿಗೆ ಉದ್ಯೋಗ ಕಾರ್ಡ್ ನೀಡಲಾಗುತ್ತಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !