ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇವವಾಗಿದ್ದ ರನ್‌ವೇಯಲ್ಲಿ ಜಾರಿ, ತುಂಡಾದ ವಿಮಾನ: 3 ಸಾವು, 179 ಮಂದಿಗೆ ಗಾಯ

Last Updated 6 ಫೆಬ್ರುವರಿ 2020, 5:36 IST
ಅಕ್ಷರ ಗಾತ್ರ

ಇಸ್ತಾಂಬುಲ್‌:ಪೆಗಾಸಾಸ್‌ ಏರ್‌ಲೈನ್ಸ್‌ನ ವಿಮಾನ ಇಸ್ತಾಂಬುಲ್‌ನ ಸಬಿಹಾ ಗೊಕ್ಸೆನ್ ನಿಲ್ದಾಣದಲ್ಲಿ ಇಳಿದು ರನ್‌ವೇನಲ್ಲಿ ಹೋಗುತ್ತಿರುವಾಗ ಜಾರಿ, ಮೂರು ತುಂಡುಗಳಾದ ಘಟನೆ ಇಲ್ಲಿ ನಡೆದಿದೆ. ಇದರಲ್ಲಿ ಮೂವರು ಮೃತಪಟ್ಟಿದ್ದು, 179 ಮಂದಿ ಗಾಯಗೊಂಡಿದ್ದಾರೆ.

‘ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 183 ಮಂದಿ ವಿಮಾನದಲ್ಲಿದ್ದರು. ಎಲ್ಲರನ್ನು ಹೊರಗೆ ತೆಗೆಯಲಾಗಿದ್ದು, ಗಾಯಗೊಂಡಿದ್ದ ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ಎಂದು ಇಲ್ಲಿನ ಆರೋಗ್ಯ ಸಚಿವರು ತಿಳಿಸಿದರು.

‘ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ರನ್‌ವೇನಲ್ಲಿ ತೇವಾಂಶ ಇತ್ತು. ಇದರಿಂದ ವಿಮಾನವು ನಿಲ್ಲಲ್ಲು ಸಾಧ್ಯವಾಗದೆಸುಮಾರು 50-60 ಮೀಟರ್ ಜಾರಿದೆ. ವಿಮಾನವುಮೂರು ತುಂಡಾಗಿದ್ದು, ಒಂದು ತುಂಡು ಸುಮಾರು 30-40 ಮೀಟರ್ ದೂರಕ್ಕೆ ಸಿಡಿದಿದೆ’ ಎಂದು ಅವರು ವಿವರಿಸಿದರು.

ಘಟನೆ ಹಿನ್ನೆಲೆಯಲ್ಲಿ ಸಬಿಹಾ ಗೊಕ್ಸೆನ್ ವಿಮಾನ ನಿಲ್ದಾಣಕ್ಕೆ ಬರುವ ವಿಮಾನಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ವಿಮಾನ ನಿಲ್ದಾಣತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT