ಮಂಗಳವಾರ, ಜೂಲೈ 7, 2020
27 °C

ಕಜಕಿಸ್ತಾನದಲ್ಲಿ ವಿಮಾನ ಪತನ: 12 ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಅಲ್ಮಾಟಿ: ಐವರು ಸಿಬ್ಬಂದಿ ಸೇರಿ 100 ಮಂದಿಯಿದ್ದ ವಿಮಾ ನವೊಂದು ಹಾರಾಟ ಆರಂಭಿಸಿದ ಕೆಲಕ್ಷಣದಲ್ಲೇ ಮನೆಯೊಂದರ ಮೇಲೆ ಪತನವಾಗಿ ಕ್ಯಾಪ್ಟನ್‌ ಸೇರಿ 12 ಜನರು ಮೃತಪಟ್ಟ ಘಟನೆ ಕಜಕಸ್ತಾನದ ಅಲ್ಮಾಟಿಯಲ್ಲಿ ನಡೆದಿದೆ. 

‘ಬೆಕ್‌ ಏರ್‌’ ಸಂಸ್ಥೆಗೆ ಸೇರಿದ 23 ವರ್ಷ ಹಳೆಯ ವಿಮಾನ ಅಲ್ಮಾಟಿ ವಿಮಾನ ನಿಲ್ದಾಣದಿಂದ ರಾಜಧಾನಿ ನೂರ್‌–ಸುಲ್ತಾನ್‌ಗೆ ಸ್ಥಳೀಯ ಸಮಯ ಬೆಳಗ್ಗೆ 7.05ಕ್ಕೆ ಹಾರಾಟ ಆರಂಭಿಸಿತ್ತು. ಟೇಕ್‌ಆಫ್‌ ಆದ ಕೆಲ ನಿಮಿಷಗಳಲ್ಲೇ ರೆಡಾರ್‌ ಸಂಪರ್ಕ ಕಡಿತಗೊಂಡಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. 

ವಿಮಾನ ನಿಲ್ದಾಣದ ಈಶಾನ್ಯ ಕ್ಕಿರುವ ನಗರದ ಹೊರವಲಯದಲ್ಲಿ ಪತನಗೊಂಡ ವಿಮಾನ, ಎರಡು ಅಂತಸ್ತಿನ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ವಿಮಾನವು ಸಂಪೂರ್ಣ ಜಖಂ ಆಗಿದೆ. ಘಟನೆ ನಡೆದ ಮರುಕ್ಷಣವೇ ಬೆಕ್‌ ಏರ್‌ನ ಎಲ್ಲ ‘ಪೋಕರ್‌’ ಮಾದರಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವ ಕಜಕಸ್ತಾನ ಸರ್ಕಾರವು, ಅವಘಡದ ಕುರಿತು ತನಿಖೆಗೆ ಆದೇಶಿಸಿದೆ. 

ಅವಘಡಕ್ಕೆ ಕಾರಣ: ಟೇಕ್‌ಆಫ್‌ ಸಂದರ್ಭದಲ್ಲಿ ವಿಮಾನದ ಹಿಂಭಾಗವು ರನ್‌ವೇಗೆ ಎರಡು ಬಾರಿ ಅಪ್ಪಳಿಸಿದೆ ಎಂದು ಉಪಪ್ರಧಾನಿ ರೋಮನ್‌ ಸ್ಕ್ಲಿಯರ್‌ ತಿಳಿಸಿದೆ. ಇದು ಪೈಲೆಟ್‌ ಮಾಡಿದ ತಪ್ಪಾಗಿರಬಹುದು ಅಥವಾ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಿರಬಹುದು. ಪತನಗೊಂಡ ವಿಮಾನ ಇಬ್ಭಾಗವಾಗಿತ್ತು. ವಿಮಾನದ ಮುಂದಿನ ಭಾಗದಲ್ಲಿದ್ದ ಪ್ರಯಾಣಿಕರ ಪೈಕಿ ಕೆಲವರು ಮೃತಪಟ್ಟಿದ್ದಾರೆ’ ಎಂದು ಸ್ಕ್ಲಿಯರ್‌ ತಿಳಿಸಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು