ಭಾನುವಾರ, ಮೇ 16, 2021
25 °C

ಟ್ಯಾಕ್ಸಿಯಲ್ಲಿ ಹೆರಿಗೆ ಮಾಡಿಸಿದ ಪೊಲೀಸ್‌ ಅಧಿಕಾರಿ: ಮಗುವಿಗೆ ಆ ಅಧಿಕಾರಿ ಹೆಸರು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ: ಮಲೇಷಿಯಾದ ಮಹಿಳಾ ಪೊಲೀಸ್‌ ಅಧಿಕಾರಿ ಕೋಮತಿ ನಾರಾಯಣ್‌ ಅವರು ದಾರಿ ಮಧ್ಯೆ ಟ್ಯಾಕ್ಸಿಯಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದು ಅವರ ಹೆಸರನ್ನು ಆ ಮಗುವಿಗೆ ನಾಮಕರಣ ಮಾಡಲಾಗಿದೆ. 

ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಇಂಡೋನೇಷ್ಯಾದ ಮಹಿಳೆ ವೈದ್ಯಕೀಯ ನೆರವಿಗಾಗಿ ಮಲೇಷಿಯಾ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಕೋಮತಿ ನಾರಾಯಣ್‌ ಟ್ಯಾಕ್ಸಿ ತರಿಸಿ ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರಕ್ತಸ್ರಾವವಾಗುವುದನ್ನು ಗಮನಿಸಿ ಟ್ಯಾಕ್ಸಿಯಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

3.7 ಕೆ.ಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ ಆ ಮಹಿಳೆ ಮಗುವಿಗೆ ಕೋಮತಿ ನಾರಾಯಣ್ ಅವರ ಹೆಸರನ್ನು ಇಟ್ಟಿದ್ದಾರೆ. ಆ ಮಗುವನ್ನು ನಾರಾಯಣ್‌ ಎಂದು ಕರೆದಿದ್ದಾರೆ.

ಕೋಮತಿ ನಾರಾಯಣ್‌ ಅವರ ಕರ್ತವ್ಯ ಪ್ರಜ್ಞೆಯನ್ನು ಮಲೇಷಿಯಾ ಪೊಲೀಸ್‌ ಇಲಾಖೆ ಪ್ರಶಂಸಿಸಿದೆ. ಕೋಮತಿ ನಾರಾಯಣ್‌, ಇಂಡೋನೇಷ್ಯಾದ ಮಹಿಳೆ ಹಾಗೂ ಮಗು ಇರುವ ಪೋಟೊವನ್ನು  ಪೊಲೀಸರು ಸಾಮಾಜಿ ಜಾಲತಾಣ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಇದು ಸಾಕಷ್ಟು ವೈರಲ್‌ ಆಗಿದ್ದು ಜನರು 'ಅಭಿನಂದನೆಗಳು ನಾರಾಯಣ್‌' ಎಂಬ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. 

ಮಲೇಷಿಯಾ ಜನರು ಕೋಮತಿ ನಾರಾಯಣ್‌ ಅವರ ಸೇವೆಯನ್ನು ಶ್ಲಾಘನೆ ಮಾಡುತ್ತಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು