ಜಪಾನ್‌ ಉತ್ತರ ಭಾಗದಲ್ಲಿ ಪ್ರಬಲ ಭೂಕಂಪ

7

ಜಪಾನ್‌ ಉತ್ತರ ಭಾಗದಲ್ಲಿ ಪ್ರಬಲ ಭೂಕಂಪ

Published:
Updated:
Deccan Herald

ಟೋಕಿಯೊ: ಗುರುವಾರ ಬೆಳಗಿನ ಜಾವ ಜಪಾನ್‌ನ ಉತ್ತರ ಭಾಗದ ಹೊಕ್ಕಾಯ್ಡೊ ದ್ವೀಪ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. 

ಹೊಕ್ಕಾಯ್ಡೊದ ದಕ್ಷಿಣ ಭಾಗದಲ್ಲಿ ಬೆಳಗಿನ ಜಾವ 3:08ಕ್ಕೆ ಭೂಮಿ ನಡುಗಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪದ ಪ್ರಮಾಣ 6.7 ದಾಖಲಾಗಿರುವುದಾಗಿ ಜಪಾನ್‌ನ ಹವಾಮಾನ ಇಲಾಖೆ ಹೇಳಿದೆ. 

ಟೊಮಾಕೊಮಾಯ್‌ ನಗರ ಭಾಗದ ನೆಲದೊಳಗೆ 40 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ. ಆದರೆ, ಕಂಪನ 19 ಲಕ್ಷ ಜನಸಂಖ್ಯೆ ಇರುವ ಹೊಕ್ಕಾಯ್ಡೊ ಪ್ರದೇಶದಲ್ಲಿಯೂ ಹೆಚ್ಚಿನ ಹಾನಿ ಸೃಷ್ಟಿಸಿದೆ. ಜಪಾನ್‌ ರಾಷ್ಟ್ರೀಯ ಮಾಧ್ಯಮದ ಪ್ರಕಾರ, ಭೂಕಂಪನದ ಪರಿಣಾಮ ಸಂಭವಿಸಿದ ಅಪಘಾತ ಮತ್ತು ಭೂಕುಸಿದಲ್ಲಿ 125 ಜನರು ಗಾಯಗೊಂಡಿದ್ದಾರೆ ಹಾಗೂ 20 ಮಂದಿ ಕಾಣೆಯಾಗಿದ್ದಾರೆ. ಒಬ್ಬರು ಮೃತಪಟ್ಟಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

(ಕುಸಿದಿರುವ ರಸ್ತೆಗಳು – ಚಿತ್ರ ಕೃಪೆ: ರಾಯ್ಟರ್ಸ್‌)

ಯೋಶಿನೊ ಜಿಲ್ಲೆಯಲ್ಲಿ ಐದು ಮಂದಿ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ. ಭೂಕುಸಿತದಲ್ಲಿ ಸಿಲುಕಿದ್ದ 40 ಮಂದಿಯನ್ನು ಹೆಲಿಕಾಪ್ಟರ್‌ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸಿರುವುದಾಗಿ ಸಚಿವ ಜಿರೊ ಅಕಾಮಾ ತಿಳಿಸಿದ್ದಾರೆ. 

ದ್ವೀಪ ರಾಷ್ಟ್ರದ ಬಹುತೇಕ ರಸ್ತೆಗಳು ಕುಸಿದಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ವಿಮಾನ ನಿಲ್ದಾಣಗಳು ಕಾರ್ಯಸ್ಥಗಿತಗೊಳಿಸಿವೆ ಹಾಗೂ ವಿದ್ಯುತ್‌ ವ್ಯತ್ಯಯದಿಂದ ಕಾರ್ಯ ಚಟುವಟಿಕೆಗಳಿಗೆ ತಡೆಯಾಗಿದೆ. ರಕ್ಷಣಾ ಕಾರ್ಯಾಚರಣೆಗೆ 25 ಸಾವಿರ ಮಂದಿ ಸಿಬ್ಬಂದಿ ನಿಯೋಜಿಸಿರುವುದಾಗಿ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ. 

 

 

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !