ಪೆಸಿಫಿಕ್‌ ಸಾಗರದ ಒಡಲಲ್ಲಿ ತೀವ್ರ ಕಂಪನ

7

ಪೆಸಿಫಿಕ್‌ ಸಾಗರದ ಒಡಲಲ್ಲಿ ತೀವ್ರ ಕಂಪನ

Published:
Updated:
Deccan Herald

ಪೆಸಿಫಿಕ್‌ ಸಾಗರದಲ್ಲಿ 8.2ರಷ್ಟು ತೀವ್ರ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದೆ. ಫಿಜಿ ಮತ್ತು ಟೋಂಗಾ ಸಮೀಪ ಭೂಮಿಯ ಬಹಳಷ್ಟು ಆಳದಲ್ಲಿ ಕಂಪನ ಉಂಟಾಗಿದ್ದು, ಭೂಮಿಯ ಮೇಲ್ಮೈ ಮೇಲೆ ಯಾವುದೇ ಹಾನಿಯಾಗದು ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ(ಯುಎಸ್‌ಜಿಎಸ್‌) ಹೇಳಿದೆ. 

ನೆಲದಿಂದ 347.7 ಮೈಲಿ(560 ಕಿ.ಮೀ.) ಆಳದಲ್ಲಿ ಕಂಪನ ಉಂಟಾಗಿರುವುದರಿಂದ ಸುನಾಮಿ ಎಚ್ಚರಿಕೆ ಸೃಷ್ಟಿಯಾಗುವ ಭೀತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. 

ಕಂಪನದ ತೀವ್ರತೆ ಹೆಚ್ಚಿದ್ದು ಜನರಿಗೆ ಭೂಮಿ ನಡುಗಿದ ಅನುಭವ ಆಗಿದ್ದರೂ ಸಹ, ಇದರಿಂದ ಯಾವುದೇ ಹಾನಿ ಸಂಭವಿಸದು ಎಂದು ಯುಎಸ್‌ಜಿಎಸ್‌ ಎಂದಿದೆ. ಫಿಜಿಯ ಪೂರ್ವ ಭಾಗದಲ್ಲಿ 270 ಕಿ.ಮೀ. ದೂರ ಭೂಕಂಪನ ಸೃಷ್ಟಿಯಾದ ಕೇಂದ್ರ ಗುರುತಿಸಲಾಗಿದೆ ಹಾಗೂ ಇದು ಟೋಂಗಾ ದ್ವೀಪದಿಂದ 443 ಕಿ.ಮೀ. ದೂರದಲ್ಲಿದೆ. 

 

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !