ಫಿಡೆಲ್‌ ಕ್ಯಾಸ್ಟ್ರೊಗೆ ಕೋವಿಂದ್‌ ಗೌರವ

7

ಫಿಡೆಲ್‌ ಕ್ಯಾಸ್ಟ್ರೊಗೆ ಕೋವಿಂದ್‌ ಗೌರವ

Published:
Updated:
ರಾಷ್ಟ್ರ‍ಪತಿ ರಾಮನಾಥ್‌ ಕೋವಿಂದ್‌ ಮತ್ತು ಪತ್ನಿ ಸವಿತಾ ಕೋವಿಂದ್‌ ಅವರು ಫಿಡೆಲ್‌ ಕ್ಯಾಸ್ಟ್ರೊ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ

ಹವಾನಾ,ಕ್ಯೂಬಾ: ಇಲ್ಲಿನ ಸ್ಯಾಂಟಿಯಾಗೊ ಡಿ ಕ್ಯೂಬಾದಲ್ಲಿರುವ ಕ್ರಾಂತಿಕಾರಿ ನಾಯಕ ಫಿಡೆಲ್‌ ಕ್ಯಾಸ್ಟ್ರೊ ಅವರ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭೇಟಿ ನೀಡಿ ಗೌರವ ಸಲ್ಲಿಸಿದರು.

‘ಭಾರತಕ್ಕೆ ಆಪ್ತರಾಗಿದ್ದ ಕ್ಯಾಸ್ಟ್ರೊ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗಿದ್ದರು’ ಎಂದು ಕೋವಿಂದ್‌ ಹೇಳಿದ್ದಾರೆ.

ಕೋವಿಂದ್‌ ಅವರ ಪತ್ನಿ ಸವಿತಾ ಕೋವಿಂದ್‌ ಕೂಡ ಜೊತೆಗಿದ್ದರು.

ಕೋವಿಂದ್‌ ಅವರು ಕ್ಯೂಬಾದ ಅಧ್ಯಕ್ಷ ಮಿಗುಯೆಲ್‌ ಡಿಯಾಜ್‌ ಕೆನೆಲ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !