ಭಾನುವಾರ, ಜೂನ್ 7, 2020
22 °C

ಕೋವಿಡ್‌ ಚಿಕಿತ್ಸೆಗೆ ‘ಐಎಫ್‌ಎನ್ –ಎ2ಬಿ’ ಪರಿಣಾಮಕಾರಿ ಔಷಧ: ಸಂಶೋಧಕರ ಅಭಿಪ್ರಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಟೊರಂಟೊ: ಜ್ವರಕ್ಕೆ ನೀಡಲಾಗುತ್ತಿದ್ದ ಔಷಧ ‘ಇಂಟರ್‌ಫೆರಾನ್ (ಐಎಫ್‌ಎನ್) –ಎ2ಬಿ’,  ಕೋವಿಡ್‌ ರೋಗಿಗಳು ತ್ವರಿತವಾಗಿ ಗುಣಮುಖರಾಗಲು ನೆರವಾಗಲಿದೆ. ಅಲ್ಲದೆ, ಈ ಮೂಲಕ ಸೋಂಕು ಹರಡುವ ವೇಗವನ್ನು ಕುಗ್ಗಿಸಲು ನೆರವಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

ಈ ಕುರಿತು ನಿಯತಕಾಲಿಕವೊಂದರಲ್ಲಿ ಪ್ರಕಟಿಸಲಾದ ಅಧ್ಯಯನ ವರದಿಯೊಂದರ ಪ್ರಕಾರ, ಉಲ್ಲೇಖಿತ ಔಷಧವು ರೋಗಿಯನ್ನು ಸೋಂಕು ಮುಕ್ತಗೊಳಿಸಲಿದ್ದು, ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ.

ಕೆನಡಾದ ಟೊರಂಟೊ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಹಲವು ವರ್ಷಗಳಿಂದ ಬಳಕೆಯಲ್ಲಿರುವ ಔಷಧವು ಕೋವಿಡ್‌ ರೋಗಿಗಳಲ್ಲಿ ಏಳು ದಿನಗಳ ಅವಧಿಯಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಈ ಔಷಧವು ರೋಗಿಯ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಲಿದೆ. ಹೊಸ ಸೋಂಕು ಕಂಡುಬಂದಾಗ ಪ್ರತ್ಯೇಕ ಔಷಧ ಪತ್ತೆಗೆ ಬದಲಾಗಿ ಪ್ರಾಥಮಿಕ ಚಿಕಿತ್ಸೆಗೆ ಲಭ್ಯವಿರುವ ಪರಿಣಾಮಕಾರಿ ಔಷಧವನ್ನು ಪರಿಗಣಿಸಬೇಕು ಎಂದು ಅಧ್ಯಯನ ವರದಿಯ ಲೇಖಕ, ಟೊರಂಟೊ ವಿಶ್ವವಿದ್ಯಾಲಯದ ಎಲಿನೊರ್ ಫಿಶ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು