ಸೋಮವಾರ, ಸೆಪ್ಟೆಂಬರ್ 16, 2019
27 °C

ಪಪುವಾ: ಸಂಸತ್ ಭವನಕ್ಕೆ ಬೆಂಕಿ

Published:
Updated:

ಮೆನಕ್ವಾರಿ: ಇಂಡೊನೇಷ್ಯಾದ ಪಶ್ಚಿಮ ಪಪುವಾ ಪ್ರಾಂತದಲ್ಲಿ ರಾಷ್ಟ್ರಧ್ವಜಕ್ಕೆ ಹಾನಿಮಾಡಿದ ಆರೋಪದ ಮೇಲೆ ವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆ ವಿರೋಧಿಸಿ ಸಾವಿರಾರು ಪ್ರತಿಭಟನಕಾರರು ಸೋಮವಾರ ಸ್ಥಳೀಯ ಸಂಸತ್ ಭವನಕ್ಕೆ ಬೆಂಕಿ ಹಚ್ಚಿದ್ದಾರೆ.

ಪೂರ್ವ ಜಾವಾದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ರಾಷ್ಟ್ರಧ್ವಜ ಹಾಳು ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

ಈ ಸಂಬಂಧ ವಿಚಾರಣೆಗೆ ಒಳಪಡಲು ನಿರಾಕರಿಸಿದ್ದರಿಂದ ಇಂಡೊನೇಷ್ಯಾ ಪೊಲೀಸರು ಸೇನೆಯ ಬೆಂಬಲದೊಂದಿಗೆ 43 ವಿದ್ಯಾರ್ಥಿಗಳನ್ನು ಬಂಧಿಸಿದ್ದರು.

Post Comments (+)