ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆರಹಿತ ಪ್ರಯಾಣ: ‘ಕ್ವಾಂಟಸ್‌’ ದಾಖಲೆ

ನ್ಯೂಯಾರ್ಕ್‌– ಸಿಡ್ನಿ ನಡುವೆ 19 ಗಂಟೆ ಹಾರಾಟ ನಡೆಸಿದ ಬೋಯಿಂಗ್‌ ವಿಮಾನ
Last Updated 20 ಅಕ್ಟೋಬರ್ 2019, 20:11 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾದ ವಿಮಾನಯಾನ ಸಂಸ್ಥೆ ‘ಕ್ವಾಂಟಸ್‌’ನ ಪ್ರಯಾಣಿಕರ ವಿಮಾನವು ತಡೆರಹಿತ
ವಾಗಿ ಅತಿ ಹೆಚ್ಚು ದೂರದ ಸಂಚಾರವನ್ನು ಯಶಸ್ವಿಯಾಗಿ ಪೂರೈಸಿ ದಾಖಲೆ ಬರೆದಿದೆ.

ನ್ಯೂಯಾರ್ಕ್‌ನಿಂದ ಶುಕ್ರವಾರ ಹೊರಟಿದ್ದ ಬೋಯಿಂಗ್‌787–9 ವಿಮಾನವು 19 ಗಂಟೆಗಳ ಕಾಲ ಹಾರಾಟ ನಡೆಸಿ ಭಾನುವಾರ ಬೆಳಿಗ್ಗೆ ಸಿಡ್ನಿ ತಲುಪಿದೆ.

ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 49 ಮಂದಿ ಪ್ರಯಾಣಿಕರು ಇದ್ದರು. ಇಂಧನವನ್ನು ಮರುಭರ್ತಿ ಮಾಡದೇ 16,000 ಕಿಲೊಮೀಟರ್‌ಗೂ ಹೆಚ್ಚು ದೂರ ಸಾಗುವಂತೆ ಮಾಡಲು ಪ್ರಯಾಣಿಕರ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು.

ದೀರ್ಘ ಹಾರಾಟ ಪ್ರಯಾಣಿಕರ ವಿಮಾನಯಾನ ಸೇವೆಯನ್ನು ಆರಂಭಿಸಿದ ಹೆಗ್ಗಳಿಕೆಗೆ ಆಸ್ಟ್ರೇಲಿಯಾದ
ಸಾರ್ವಜನಿಕ ವಿಮಾನಯಾನ ಸಂಸ್ಥೆ ‘ಕ್ವಾಂಟಸ್‌’ ಪಾತ್ರವಾಗಿದೆ. ಈ ಮೊದಲು ಪರ್ತ್‌–ಲಂಡನ್‌ ನಡುವೆ ವಿಮಾನ ಆರಂಭಿಸಿ ದಾಖಲೆ ನಿರ್ಮಿಸಿತ್ತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲನ್‌ ಜೋಯ್ಸ್, ಜಾಗತಿಕ ವಿಮಾನಯಾನ ಕ್ಷೇತ್ರಕ್ಕೆ ಇದೊಂದು ಐತಿಹಾಸಿಕ ಕ್ಷಣ ಎಂದು ಸಂತಸ ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಕಾರ್ಬೋಹೈಡ್ರೇಟ್‌ ಹೆಚ್ಚು ಇರುವ ಆಹಾರವನ್ನು ಪ್ರಯಾಣಿಕರಿಗೆ ನೀಡಲಾಗಿತ್ತು. ಮಂದ ಬೆಳಕು ಇರುವಂತೆ ಮಾಡಿ ಪ್ರಯಾಣಿಕರು ಹೆಚ್ಚು ನಿದ್ರೆ ಮಾಡುವ ವಾತಾವರಣವನ್ನು ನಿರ್ಮಿಸಲಾಗಿತ್ತು ಎಂದಿದ್ದಾರೆ.

ವಿವಿಧ ಕಾಲ ವಲಯಗಳಲ್ಲಿ ವಿಮಾನ ಸಂಚಾರದಿಂದ ಹಾಗೂ ಸುದೀರ್ಘ ಪ್ರಯಾಣದಿಂದ ಪ್ರಯಾಣಿ
ಕರ ಆರೋಗ್ಯದ ಮೇಲೆ ಆಗಿರುವ ಪರಿಣಾಮಗಳನ್ನುಅಧ್ಯಯನ ಮಾಡಲು ಆಸ್ಟ್ರೇಲಿಯಾದ ಎರಡು
ವಿಶ್ವವಿದ್ಯಾಲಯಗಳ ಸಂಶೋಧನಾ ತಂಡದ ಸಹಾಯ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT