ಸೋಮವಾರ, ಡಿಸೆಂಬರ್ 9, 2019
20 °C

ವಿಯೆಟ್ನಾಂ: ಜಿಂಕೆ ಹೋಲುವ ಪ್ರಾಣಿ ಪತ್ತೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಹನೋಯಿ: ಈಗ್ಗೆ 30 ವರ್ಷಗಳಿಂದ ವಿಜ್ಞಾನಿಗಳಿಗೆ ಕಾಣಿಸದೇ ಇದ್ದ ಜಿಂಕೆ ರೀತಿಯ ಪ್ರಾಣಿಯೊಂದು ದಕ್ಷಿಣ ವಿಯೆಟ್ನಾಂನಲ್ಲಿ ಪತ್ತೆಯಾಗಿದೆ.

ಬೆನ್ನಿನ ಮೇಲೆ ಬೆಳ್ಳಿಯ ಬಣ್ಣ ಹೊಂದಿರುವ ಚಿವ್ರೊಟೈನ್‌ ಪ್ರಾಣಿಯ ಚಿತ್ರಗಳು ಈಗ ಲಭ್ಯವಾಗಿವೆ. ಇದನ್ನು ವಿಯೆಟ್ನಾಂನ ಇಲಿ ಜಿಂಕೆ ಎಂದು ಕರೆಯುತ್ತಾರೆ ಎಂದು ಪ್ರಾಣಿ ಸಂರಕ್ಷಕರು ಹೇಳಿದ್ದಾರೆ. ಅರಣ್ಯದಲ್ಲಿ ಇಡಲಾಗುವ ಕ್ಯಾಮೆರಾಗಳಿಗೆ ಇದು ಸೆರೆ ಸಿಕ್ಕಿದೆ.

‘ಮೊಲದ ಗಾತ್ರದ ಈ ಪ್ರಾಣಿ ಜಿಂಕೆ ಅಥವಾ ಇಲಿಯಲ್ಲ. ಆದರೆ ಇದಕ್ಕೆ ಈ ರೀತಿಯ ಅಡ್ಡ ಹೆಸರು ಇರಬಹುದು. ಇದು ವಿಶ್ವದ ಅತಿ ಸಣ್ಣ ಗೊರಸು ಸಸ್ತನಿ’ ಎಂದು ಅವರು ಹೇಳಿಕೆಯೊಂದರಲ್ಲಿ ವಿವರಿಸಿದ್ದಾರೆ. 

‘ಈ ಪ್ರಾಣಿ ನಾಚಿಕೆ ಸ್ವಭಾವದ್ದು ಮತ್ತು ಏಕಾಂಗಿಯಾಗಿರುತ್ತದೆ. ಎರಡು ಸಣ್ಣ ಕೋರೆ ಹಲ್ಲುಗಳನ್ನು ಹೊಂದಿರುವ ಇದು, ಗೊರಸಿನ ಸಹಾಯದಿಂದ ನಡೆಯುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು