ಶುಕ್ರವಾರ, ಆಗಸ್ಟ್ 23, 2019
26 °C

‘ಆಫ್ರಿಕನ್ನರು ಕೋತಿಗಳು’ ಎಂದಿದ್ದ ರೇಗನ್‌

Published:
Updated:

ವಾಷಿಂಗ್ಟನ್‌ (ನ್ಯೂಯಾರ್ಕ್‌ ಟೈಮ್ಸ್‌): ರೊನಾಲ್ಡ್‌ ರೇಗನ್‌ ಅವರು 1971 ರಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್‌ ಆಗಿದ್ದ ವೇಳೆ ಆಗಿನ ಅಧ್ಯಕ್ಷ ರಿಚರ್ಡ್‌ ಎಂ.ನಿಕ್ಸನ್‌ ಅವರೊಂದಿಗೆ ಮಾತನಾಡಿದಾಗ ಆಫ್ರಿಕನ್ನರು ‘ಕೋತಿಗಳು’ ಎಂದು ಹೇಳಿದ್ದ ಟೇಪ್ ಈಗ ಬಯಲಾಗಿದೆ.

ತಮ್ಮ ರಾಜಕೀಯ ಹತಾಶೆಯನ್ನು ವ್ಯಕ್ತಪಡಿಸಲು ಶ್ವೇತಭವನಕ್ಕೆ ಕರೆ ಮಾಡಿದ್ದರಂತೆ. ಇತ್ತೀಚೆಗೆ ಈ ಧ್ವನಿಮುದ್ರಿಕೆ ಬಯಲಿಗೆ ಬಂದಿದೆ. ‘ಕೋತಿಗಳು’ ಎಂದು ರೇಗನ್‌ ಅವರು ಹೇಳಿದ್ದನ್ನು ಕೇಳಿ ನಿಕ್ಸನ್‌ ಅವರು ನಕ್ಕಿದ್ದರು. 

ಚೀನಾದ ಪ್ರತಿನಿಧಿಗಳಿಗೆ ವಿಶ್ವಸಂಸ್ಥೆಯಲ್ಲಿ ಸ್ಥಾನ ನೀಡುವ ಸಲುವಾಗಿ ತೈವಾನ್ ಅನ್ನು ಹೊರಹಾಕಿದ್ದ ವೇಳೆ ಈ ಮಾತುಕತೆ ನಡೆದಿತ್ತು.

Post Comments (+)