ಗುರುವಾರ , ಅಕ್ಟೋಬರ್ 17, 2019
24 °C

ಪಿ–5 ರಾಷ್ಟ್ರಗಳ ಪ್ರತಿನಿಧಿಗಳು ಭೇಟಿ ನೀಡಲಿ: ಪಾಕ್‌

Published:
Updated:

ಇಸ್ಲಾಮಾಬಾದ್‌ : ಭಯೋತ್ಪಾದಕರ ಶಿಬಿರಗಳು ಮತ್ತೆ ಸಕ್ರಿಯವಾಗಿವೆ ಎಂದು ಭಾರತ ಹೇಳಿರುವ ಯಾವುದೇ ಪ್ರದೇಶಗಳಿಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯರಾದ (ಪಿ–5 ರಾಷ್ಟ್ರಗಳು) ದೇಶಗಳ ಪ್ರತಿನಿಧಿಗಳು ಭೇಟಿ ನೀಡಬಹುದು ಎಂದು ಪಾಕಿಸ್ತಾನ ಹೇಳಿದೆ.

ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಉಗ್ರರ ಶಿಬಿರಗಳು ಮತ್ತೆ ಸಕ್ರಿಯಗೊಂಡಿದ್ದು, 500 ಉಗ್ರರು ಭಾರತಕ್ಕೆ ನುಸುಳಲು ಸಿದ್ಧರಾಗಿದ್ದಾರೆ ಎಂದು ಭಾರತದ ಸೇನೆಯ ಮುಖ್ಯಸ್ಥ ಬಿಪಿನ್‌ ರಾವತ್‌ ಈಚೆಗೆ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಹಂಗಾಮಿ ವಿದೇಶಾಂಗ ಕಾರ್ಯದರ್ಶಿ ಮೊಜಾಮ್‌ ಅಹಮ್ಮದ್‌ ಖಾನ್‌, ‘ಪಿ–5 ರಾಷ್ಟ್ರಗಳ ಪ್ರತಿನಿಧಿಗಳು ಭೇಟಿ ನೀಡುವುದಾದರೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು’ ಎಂದಿದ್ದಾರೆ.

 

Post Comments (+)