ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಬೋ ಪ್ರವಚನ

Last Updated 16 ಆಗಸ್ಟ್ 2019, 18:44 IST
ಅಕ್ಷರ ಗಾತ್ರ

ಕ್ಯೊಟೊ(ಜಪಾನ್‌): ಇಲ್ಲಿನ ಸುಮಾರು 400 ವರ್ಷ ಹಳೆಯದಾದ ಬೌದ್ಧ ದೇವಾಲಯ ’ಕೊಡಜಿ’ಯಲ್ಲಿ ಯಂತ್ರ ಮಾನವನನ್ನು(ರೋಬೋ) ಪಾದ್ರಿಯನ್ನಾಗಿ ನೇಮಿಸಲಾಗಿದ್ದು, ಈ ಸುದ್ದಿ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಆಂಡ್ರಾಯ್ಡ್‌ ಕೆನಾನ್‌ ತಂತ್ರಾಂಶ ಆಧಾರಿತ ಈ ರೋಬೋ, ಕೃತಕ ಬುದ್ಧಿ ಮತ್ತೆಯನ್ನು ಹೊಂದಿದ್ದು ಇತರ ಪಾದ್ರಿಗಳಂತೆಯೇ ಕಾರ್ಯ ನಿರ್ವಹಿಸುತ್ತದೆ.

ಕರುಣೆ ಹಾಗೂ ಧರ್ಮೋಪದೇಶವನ್ನು ಬೋಧಿಸುವ ಈ ರೋಬೋಗೆ ಸಾವಿಲ್ಲ. ತನ್ನಿಂದ ತಾನೇ ಅಪ್‌ಡೇಟ್‌ ಆಗುವ ಇದರ ಜ್ಞಾನವೂ ನಿತ್ಯ ವರ್ಧಿಸುತ್ತಲೇ ಇರುತ್ತದೆ. ಎಲ್ಲ ರೀತಿಯ ಮಾಹಿತಿಯನ್ನೂ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವುದೇ ಇದರ ಆಕರ್ಷಣೆ ಎಂದು ಹೇಳುತ್ತಾರೆ ಪಾದ್ರಿ ಟೆನ್ಷೋ ಗೊಟೊ.

ಕೃತಕ ಬುದ್ಧಿಮತ್ತೆಯೊಂದಿಗೆ ತನ್ನ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಳ್ಳುವ ಈ ಪೂಜಾರಿ ಎಂತಹದೇ ಸಮಸ್ಯೆಯಿದ್ದರೂ ಪರಿಹಾರವನ್ನು ಗುರುತಿಸಬಲ್ಲುದು ಎಂಬುದು ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT