ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ರೋಹಿಂಗ್ಯಾ ನಿರಾಶ್ರಿತರ ಹತ್ಯೆ

Last Updated 24 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ತೆಕ್ನಾಫ್‌ (ಬಾಂಗ್ಲಾದೇಶ): ಇಬ್ಬರು ರೋಹಿಂಗ್ಯಾ ನಿರಾಶ್ರಿತರನ್ನು ಬಾಂಗ್ಲಾದೇಶ ಪೊಲೀಸರು ನಿರಾಶ್ರಿತರ ಶಿಬಿರದಲ್ಲಿ ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಆಡಳಿತ ಪಕ್ಷಕ್ಕೆ ಸೇರಿದ ಅಧಿಕಾರಿ ಒಮರ್‌ ಫಾರೂಕ್‌ ಅವರನ್ನು ಗುರುವಾರ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಆರೋಪದಲ್ಲಿ ಇಬ್ಬರು ನಿರಾಶ್ರಿತರನ್ನು ಸಾಯಿಸಲಾಗಿದೆ.

ನಿರಾಶ್ರಿತರನ್ನು ವಾಪಸು ಕಳುಹಿಸುವ ಬಾಂಗ್ಲಾದೇಶದ ಎರಡನೇ ಪ್ರಯತ್ನವೂ ವಿಫಲಗೊಂಡ ಎರಡು ದಿನದ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ರಖೈನ್ ರಾಜ್ಯಕ್ಕೆ ಮತ್ತೆ ಹೋಗಲು ಯಾವುದೇ ಒಬ್ಬ ನಿರಾಶ್ರಿತರು ಸಿದ್ಧರಾಗಿಲ್ಲ.

‘ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದರು’ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ಈ ಘಟನೆಯು ನಿರಾಶ್ರಿತರ ಶಿಬಿರದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಮ್ಯಾನ್ಮಾರ್‌ ಸೇನೆಯ ಶೋಷಣೆಯಿಂದಾಗಿ ಪಾರಾಗಲು ಬಾಂಗ್ಲಾದೇಶವನ್ನು ಪ್ರವೇಶಿಸಿದ ಎರಡನೇ ವರ್ಷದ ಸ್ಮರಣೆಗೆ ನಿರಾಶ್ರಿತರು ಸಿದ್ಧರಾಗುತ್ತಿದ್ದರು. ಈ ಸಂದರ್ಭದಲ್ಲಿ ಈ ಘಟನಾವಳಿಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT