ಪ್ರಶಸ್ತಿ ಮೊತ್ತ ₹7.15 ಕೋಟಿ ರೊಹಿಂಗ್ಯಾ ಮುಸ್ಲಿಮರಿಗೆ ದಾನ

7

ಪ್ರಶಸ್ತಿ ಮೊತ್ತ ₹7.15 ಕೋಟಿ ರೊಹಿಂಗ್ಯಾ ಮುಸ್ಲಿಮರಿಗೆ ದಾನ

Published:
Updated:

ವಾಷಿಂಗ್ಟನ್‌: ಮ್ಯಾನ್ಮಾರ್‌ನ ಸಾಮಾಜಿಕ ಕಾರ್ಯಕರ್ತ ಕ್ಯಾವ್‌ ಆಂಗ್‌, ತಮಗೆ ಸಿಕ್ಕಿರುವ ಪ್ರತಿಷ್ಠಿತ ‘ಆರೋರಾ’ ಪ್ರಶಸ್ತಿಯ ಮೊತ್ತ ₹7.15 ಕೋಟಿಯನ್ನು ರೋಹಿಂಗ್ಯಾ ಮುಸ್ಲಿಮರ ಪುನರ್ವಸತಿಗಾಗಿ ದಾನ ಮಾಡಿದ್ದಾರೆ.

ರೋಹಿಂಗ್ಯಾ ನಿರಾಶ್ರಿತರ ಪರ ಹೋರಾಟ ನಡೆಸಿದ ಹಾಗೂ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಕ್ಕಾಗಿ ಆಂಗ್‌ ಅವರಿಗೆ 2018ರಲ್ಲಿ ಈ ಪ್ರಶಸ್ತಿ ನೀಡಲಾಗಿತ್ತು.

ಈ ಹಣವನ್ನು ಮೆಡಿಸಿನ್‌ ಸಾನ್ಸ್‌ ಫ್ರಾಂಟಿಯರ್ಸ್‌ (ಎಂಎಸ್‌ಎಫ್‌), ಅಂತರರಾಷ್ಟ್ರೀಯ ಕ್ಯಾಥೋಲಿಕ್‌ ವಲಸೆ ಆಯೋಗ (ಐಸಿಎಂಸಿ) ಹಾಗೂ ಮರ್ಸಿ ಮಲೇಷ್ಯಾ ಎಂಬ ಮೂರು ಅಂತರರಾಷ್ಟ್ರೀಯ ಸಂಘಟನೆಗಳ ಉಸ್ತುವಾರಿಯಲ್ಲಿ ಆಗ್ನೇಯ ಏಷ್ಯಾದಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ವೈದ್ಯಕೀಯ ನೆರವಿಗೆ ಬಳಸಲು ನೀಡಲಾಗುತ್ತದೆ ಎಂದು ಆರೋರಾ ಮಾನವೀಯ ವಿಭಾಗ (ಎಎಚ್‌ಐ) ಮಂಗಳವಾರ ಘೋಷಣೆ ಮಾಡಿದೆ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !