ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ: ಒಂದೇ ದಿನ 9,000 ಕೊರೊನಾ ಸೋಂಕು ಪ್ರಕರಣ

Last Updated 25 ಮೇ 2020, 18:04 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದಲ್ಲಿ 24 ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿನ 9 ಸಾವಿರ ಪ್ರಕರಣಗಳು ಕಾಣಿಸಿಕೊಂಡಿದ್ದು, 92 ಮಂದಿ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಈವರೆಗೆ 3.5 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದೆ. 3,633 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ವಿಷಯದಲ್ಲಿ ಸರ್ಕಾರವು ಸುಳ್ಳು ಹೇಳುತ್ತಿರಬಹುದು ಎಂದು ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಆದರೆ, ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ.

ನನ್ನನ್ನು ನಂಬಿ, ಮತ್ತೆ ಅವಕಾಶ ಕೊಡಿ: ಟ್ರಂಪ್‌

ವಾಷಿಂಗ್ಟನ್‌: ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ಚೇತರಿಕೆ ನೀಡುವ ವಾಗ್ದಾನ ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ನನ್ನನ್ನು ನಂಬಿ‘ ಎಂದು ಮನವಿ ಮಾಡಿದ್ದಾರೆ. ಆರ್ಥಿಕ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ಸುಮಾರು 3.8 ಲಕ್ಷ ಜನರು ಕೆಲಸ ಕಳೆದುಕೊಂಡಿದ್ದಾರೆ. ಇಂಥ ಸ್ಥಿತಿಯಲ್ಲಿ ಆರ್ಥಿಕತೆಯು ವರ್ಷಾಂತ್ಯದ ವೇಳೆಗೆ ಚೇತರಿಕೆ ಕಾಣಲಿದೆ ಎಂದು ಟ್ರಂಪ್‌ ಭರವಸೆ ನೀಡಿದ್ದಾರೆ. ದೇಶದಾದ್ಯಂತ ಇದುವರೆಗೂ ಅನುಭವಿಸಿರುವ ನೋವು ಮರೆಯಿರಿ. ನಾಲ್ಕು ವರ್ಷಗಳ ಅವಧಿಗೆ ಇನ್ನೊಂದು ಅವಕಾಶ ಕೊಡಿ. 2021ರಲ್ಲಿ ದೇಶದ ಅರ್ಥ ವ್ಯವಸ್ಥೆ ಸುಸ್ಥಿತಿಗೆ ಬರಲಿದೆ ಎಂದು ಮತದಾರರಿಗೆ ಟ್ರಂಪ್‌ ಹೇಳಿದ್ದಾರೆ.

ಕೊರೊನಾ: ಭಾರತ ಮೂಲದ ಶಿಕ್ಷಕ ಸಾವು

ದುಬೈ: ಭಾರತೀಯ ಮೂಲದ ಶಿಕ್ಷಕ, 50 ವರ್ಷದ ಅನಿಲ್‌ ಕುಮಾರ್‌ ಕೋವಿಡ್‌ನಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಮೃತಪಟ್ಟಿದ್ದಾರೆ. ಅಬುಧಾಬಿಯ ಸನ್‌ರೈಸ್‌ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು. ಇವರಿಗೆ ಸೋಂಕು ಇರುವುದು ಇದೇ ತಿಂಗಳ ಏಳರಂದು ಧೃಢ‍‍ಪಟ್ಟಿತ್ತು ಎಂದು ಗಲ್ಫ್‌ ನ್ಯೂಸ್‌ ವರದಿ ಮಾಡಿದೆ.ಯುಎಇಯಲ್ಲಿ ಒಟ್ಟು 245 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, 30,000ಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT