ಬುಧವಾರ, ಸೆಪ್ಟೆಂಬರ್ 18, 2019
28 °C

ರಷ್ಯಾದಿಂದ ಕ್ಷಿಪಣಿ ಉಡಾವಣೆ ಯಶಸ್ವಿ

Published:
Updated:

ಮಾಸ್ಕೊ: ಯುದ್ಧ ತರಬೇತಿ ಅಂಗವಾಗಿ ಎರಡು ಜಲಾಂತರ್ಗಾಮಿ ಗುರುತ್ವಬಲ ಕ್ಷಿಪಣಿಗಳನ್ನು ರಷ್ಯಾ ಶನಿವಾರ ಉಡಾವಣೆ ಮಾಡಿದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

‘ಉಡಾವಣೆ ವೇಳೆ ಎಲ್ಲಾ ತಾಂತ್ರಿಕ ಅಂಶಗಳು ನಿಖರವಾಗಿದ್ದವು’ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.

ಉತ್ತರ ಕೊರಿಯಾದಿಂದಲೂ ಪರೀಕ್ಷೆ: (ಸೋಲ್‌ ವರದಿ): ಉತ್ತರ ಕೊರಿಯಾ ಶನಿವಾರ ಎರಡು ಕಡಿಮೆ ವ್ಯಾಪ್ತಿಯ ಗುರುತ್ವಬಲ ಕ್ಷಿಪಣಿಗಳನ್ನು ಪರೀಕ್ಷಾರ್ಥ ಉಡಾವಣೆ ಮಾಡಿದೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ.

ಅಮೆರಿಕ–ದಕ್ಷಿಣ ಕೊರಿಯಾ ಜಂಟಿ ಸೇನಾ ಕವಾಯತು ಪೂರ್ಣಗೊಳಿಸಿದ ಬೆನ್ನಲ್ಲೇ ಈ ಕ್ಷಿಪಣಿ ಪರೀಕ್ಷೆ ನಡೆದಿದೆ.

Post Comments (+)