ರಷ್ಯಾದಲ್ಲಿ ಹೆಲಿಕಾಪ್ಟರ್‌ಗಳ ಡಿಕ್ಕಿ: 18 ಮಂದಿ ಸಾವು

6

ರಷ್ಯಾದಲ್ಲಿ ಹೆಲಿಕಾಪ್ಟರ್‌ಗಳ ಡಿಕ್ಕಿ: 18 ಮಂದಿ ಸಾವು

Published:
Updated:

ಮಾಸ್ಕೊ: ಇಲ್ಲಿನ ಉತ್ತರ ಸೈಬೀರಿಯಾದಲ್ಲಿ ತೈಲ ಕೇಂದ್ರದತ್ತ ಸಾಗುತ್ತಿದ್ದ ಹೆಲಿಕಾಪ್ಟರ್‌ ಪತನಗೊಂಡು 18 ಮಂದಿ ಸಾವನ್ನಪ್ಪಿದ್ದಾರೆ.

‘ಎಂಐ–8 ಹೆಲಿಕಾ‍ಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಹಾಗೂ 15 ಪ್ರಯಾಣಿಕರಿದ್ದರು. ಟೇಕಾಫ್‌ ವೇಳೆ ಯಂತ್ರವೊಂದನ್ನು ಕೊಂಡೊಯ್ಯುತ್ತಿದ್ದ ಇನ್ನೊಂದು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ’ ಎಂದು ರಷ್ಯಾದ ಸಂಚಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೂಡಲೇ ಮತ್ತೊಂದು ಹೆಲಿಕಾಪ್ಟರ್‌ ಅನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಮೊದಲ ಹೆಲಿಕಾಪ್ಟರ್‌ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ಮತ್ತೊಂದರಲ್ಲಿ ತೈಲಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿದ್ದರು. 

‘ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದ್ದು, ಇದರಿಂದ ಹೆಲಿಕಾಪ್ಟರ್‌ ಕೆಳಗೆ ಪತನಗೊಂಡು, ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಇದರಿಂದ ಅದರಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !