ಸೋಮವಾರ, ಜೂನ್ 1, 2020
27 °C

ರಷ್ಯಾ: ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹಬ್ಸಿದ್ರೆ 5 ವರ್ಷದವರೆಗೆ ಜೈಲು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Russia

ಮಾಸ್ಕೊ: ಕೊರೊನಾ ವೈರಸ್ (ಕೋವಿಡ್–19) ಕುರಿತು ಸುಳ್ಳು ಸುದ್ದಿ ಹಬ್ಬಿಸುವವರಿಗೆ 5 ವರ್ಷಗಳ ವರೆಗೆ ಜೈಲು ಸೇರಿದಂತೆ ಕಠಿಣ ಶಿಕ್ಷೆಗಳನ್ನು ವಿಧಿಸುವ ಮಸೂದೆಗೆ ರಷ್ಯಾ ಸಂಸತ್‌ನ ಕೆಳಮನೆಯಲ್ಲಿ ಅನುಮೋದನೆ ದೊರೆತಿದೆ.

ಇದರ ಅಡಿಯಲ್ಲಿ, ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬುವ ಮೂಲಕ ವ್ಯಕ್ತಿಯ ಸಾವಿಗೆ ಕಾರಣವಾದರೆ ಅಂತಹವರಿಗೆ 20 ಲಕ್ಷ ರುಬೆಲ್ಸ್‌ ದಂಡ ಅಥವಾ 5 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಸುಳ್ಳು ಸುದ್ದಿ ಹಬ್ಬುವ ಮೂಲಕ ವ್ಯಕ್ತಿಯ ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡಿದರೆ ಅಂತಹವರಿಗೆ ಮೂರು ವರ್ಷ ಜೈಲು ಅಥವಾ 15 ಲಕ್ಷ ರುಬೆಲ್ಸ್‌ ದಂಡ ವಿಧಿಸಲು ಅವಕಾಶವಿದೆ.

ಕ್ವಾರಂಟೈನ್ ಉಲ್ಲಂಘಿಸುವವರಿಗೆ ಏಳು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವವೂ ಈ ಮಸೂದೆಯಲ್ಲಿದೆ.

ಮಸೂದೆಗೆ ಮೇಲ್ಮನೆಯಲ್ಲಿ ಇನ್ನಷ್ಟೇ ಅನುಮೋದನೆ ದೊರೆಯಬೇಕಿದೆ. ನಂತರ ಅಧ್ಯಕ್ಷರು ಸಹಿ ಹಾಕಬೇಕಿದ್ದು, ಬಳಿಕ ಕಾನೂನಾಗಿ ರೂಪುಗೊಳ್ಳಲಿದೆ.

ಅಧಿಕೃತ ಮಾಹಿತಿ ಪ್ರಕಾರ, ರಷ್ಯಾದಲ್ಲಿ ಈವರೆಗೆ 1,836 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, 9 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು