ಭ್ರಷ್ಟಾಚಾರ ಪ್ರಕರಣ: ಲೀ ಮ್ಯುಂಗ್‌ ಬಾಕ್‌ 15 ವರ್ಷ ಜೈಲು

7
ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷನಿಗೆ ಶಿಕ್ಷೆ

ಭ್ರಷ್ಟಾಚಾರ ಪ್ರಕರಣ: ಲೀ ಮ್ಯುಂಗ್‌ ಬಾಕ್‌ 15 ವರ್ಷ ಜೈಲು

Published:
Updated:
Deccan Herald

ಸೋಲ್‌: ಭ್ರಷ್ಟಾಚಾರ ಪ್ರಕರಣದಲ್ಲಿ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಲೀ ಮ್ಯುಂಗ್‌–ಬಾಕ್‌ ಅವರಿಗೆ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. 

76 ವರ್ಷದ ಬಾಕ್‌ ಅವರು 2008ರಿಂದ 2013ರ ತನಕ ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿದ್ದರು. ಭ್ರಷ್ಟಾಚಾರ ಹಾಗೂ ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಸೋಲ್‌ ಜಿಲ್ಲಾ ನ್ಯಾಯಾಲಯವು (11.5 ಮಿಲಿಯನ್‌ ಡಾಲರ್‌) 15 ವರ್ಷ ಜೈಲು ಮತ್ತು 85 ಕೋಟಿ ರೂ. ದಂಡ ವಿಧಿಸಿದೆ.

‘ಎಲ್ಲ ವಿಚಾರಗಳನ್ನು ಪರಿಗಣಿಸಿ, ಅಪರಾಧಿಗೆ ಗರಿಷ್ಠ ಶಿಕ್ಷೆ ವಿಧಿಸುವುದು ಅನಿವಾರ್ಯ’ ಎಂದು ನ್ಯಾಯಾಧೀಶರು ತಿಳಿಸಿದರು.

ಅನಾರೋಗ್ಯದ ಕಾರಣ ಲೀ ಅವರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಅಧಿಕಾರ ದುರುಪಯೋಗ, ಹಣ ದುರುಪಯೋಗ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಲೀ ಅವರನ್ನು ಕಳೆದ ಏಪ್ರಿಲ್‌ 16ರಂದೇ ಅಪರಾಧಿ ಎಂದು ಘೋಷಿಸಲಾಗಿತ್ತು.

ಸಹೋದರನ ಹೆಸರಿನಲ್ಲಿದ್ದ ವಾಹನಗಳ ಬಿಡಿಭಾಗ ಕಂಪನಿಯಾದ ‘ದಾಸ್‌’ ಕಂಪನಿ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ವ್ಯವಹಾರ ನಡೆಸಿದ್ದರು. ಅಲ್ಲದೇ ಸ್ಯಾಮ್‌ಸಂಗ್‌ ಕಂಪನಿಯಿಂದ ಲಂಚ ಪಡೆದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಇಂತಹುದ್ದೇ ಪ್ರಕರಣದಲ್ಲಿ ಕಳೆದ ಏಪ್ರಿಲ್‌ನಲ್ಲಿ ಪದಚ್ಯುತೆ ಅಧ್ಯಕ್ಷೆ ಪಾರ್ಕ್‌ ಜಿಯುನ್‌ಹೈ ಕೂಡ 24 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !