ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಟ್ಟಲ್‌ ದೊಡ್ಡ ಸರಣಿ ಹಂತಕ: ಎಫ್‌ಬಿಐ

Last Updated 8 ಅಕ್ಟೋಬರ್ 2019, 18:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೊಲೆ ಅಪರಾಧಿ ಸ್ಯಾಮುಯೆಲ್‌ ಲಿಟ್ಟಲ್‌ (79) ಕುರಿತು ಹಲವು ವರ್ಷಗಳ ತನಿಖೆಯ ನಂತರ ಈತ ಅಮೆರಿಕದ ಇತಿಹಾಸದಲ್ಲಿಯೇ ಅತಿ ದೊಡ್ಡ ಸರಣಿ ಹಂತಕ ಎಂದು ಭಾನುವಾರ ಫೆಡರಲ್‌ ತನಿಖಾ ಸಂಸ್ಥೆ (ಎಫ್‌ಬಿಐ) ಘೋಷಿಸಿದೆ.

‘93 ಸರಣಿ ಕೊಲೆಗಳನ್ನು ಮಾಡಿರುವುದಾಗಿ ಲಿಟ್ಟಲ್‌ ಒಪ್ಪಿಕೊಂಡಿದ್ದಾನೆ. ಆತ ನೀಡಿರುವ ಎಲ್ಲ ಮಾಹಿತಿಗಳೂ ನಂಬಲರ್ಹವಾಗಿವೆ. ಈಗಾಗಲೇ 50 ಪ್ರಕರಣಗಳನ್ನು ಭೇದಿಸಲಾಗಿದೆ. ಲಿಟ್ಟಲ್‌ಗೆ ವಯಸ್ಸಾಗಿದ್ದು, ಆರೋಗ್ಯವೂ ಹದಗೆಟ್ಟಿರುವುದರಿಂದ ಉಳಿದ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸುವುದು ಅಗತ್ಯವಾಗಿದೆ.ತಾನೇ ಕೊಲೆ ಮಾಡಿರುವ ಐವರು ಮಹಿಳೆಯರ ಚಿತ್ರವನ್ನು ಲಿಟ್ಟಲ್‌ ಬಿಡಿಸಿದ್ದು, ಇವುಗಳ ಸಹಾಯದಿಂದ ಪ್ರಕರಣವನ್ನು ಪತ್ತೆ ಹಚ್ಚಲುಸಾರ್ವಜನಿಕರ ಸಹಾಯವನ್ನು ಕೋರಲಾಗಿದೆ’ ಎಂದುತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT