ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾರನ್ನು ಹೊರಹಾಕಿದ ರೆಸ್ಟೋರೆಂಟ್

7

ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾರನ್ನು ಹೊರಹಾಕಿದ ರೆಸ್ಟೋರೆಂಟ್

Published:
Updated:

ವಾಷಿಂಗ್ಟನ್: ರೆಸ್ಟೋರೆಂಟ್‌ಗೆ ಹೋಗಿದ್ದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹಾಗೂ ಅವರ ಕುಟುಂಬವನ್ನು ಅಲ್ಲಿಂದ ಹೊರಹೋಗುವಂತೆ ಅದರ ಮಾಲೀಕರು ಸೂಚಿಸಿದ ಘಟನೆ ಶುಕ್ರವಾರ ನಡೆದಿದೆ. 

ವರ್ಜೀನಿಯಾದ ಲೆಕ್ಸಿಂಗ್ಟನ್‌ನಲ್ಲಿರುವ ರೆಡ್ ಹೆನ್ ರೆಸ್ಟೋರೆಂಟ್‌ನ ಸಹ ಮಾಲೀಕರಾದ ಸ್ಟೆಫಾನಿಯಾ ವಿಲ್ಕಿನ್‌ಸನ್ ಅವರು ಸ್ಯಾಂಡರ್ಸ್ ಅವರನ್ನು ಅಲ್ಲಿಂದ ಹೊರಹಾಕಿದ್ದಾರೆ. 

ಮೆಕ್ಸಿಕೊ ಗಡಿಯಲ್ಲಿ ಹೆತ್ತವರಿಂದ ಮಕ್ಕಳನ್ನು ಬೇರ್ಪಡಿಸುವ ವಿವಾದಾತ್ಮಕ ಆದೇಶದ ವಿರುದ್ಧ ಜನರು ಸಿಟ್ಟಿಗೆದ್ದಿದ್ದು, ಟ್ರಂಪ್ ಸರ್ಕಾರದ ಎರಡನೇ ಅಧಿಕಾರಿಯೊಬ್ಬರು ಸಾರ್ವಜನಿಕರಿಂದ  ಇಂತಹ ವಿರೋಧ ಎದುರಿಸಿದ್ದಾರೆ.

ಕೆಲ ದಿನಗಳ ಹಿಂದೆ ಆಂತರಿಕ ಭದ್ರತಾ ಸಚಿವ ಕಿರ್ಸ್ಟ್‌ಜನ್ ನೀಲ್ಸನ್ ಅವರಿಗೆ ಮೆಕ್ಸಿಕನ್ ರೆಸ್ಟೋರೆಂಟ್‌ನಲ್ಲಿ ಇಂತಹದೇ ಅನುಭವ ಆಗಿತ್ತು. 

ಟ್ವೀಟ್ ಮಾಡಿರುವ ಸ್ಯಾಂಡರ್ಸ್, ‘ನಾನು ಜನರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತೇನೆ. ಭಿನ್ನಾಭಿಪ್ರಾಯಗಳಿದ್ದರೂ ಅವರಿಗೆ ಗೌರವ ನೀಡುತ್ತೇನೆ’ ಎಂದಿದ್ದಾರೆ. 

ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ವಿಲ್ಕಿನ್‌ಸನ್, ‘ಮಕ್ಕಳನ್ನು ಬೇರ್ಪಡಿಸುವಂತಹ ಅಮಾನವೀಯ ಹಾಗೂ ಅನೈತಿಕ ಕೆಲಸಗಳನ್ನು ಸ್ಯಾಂಡರ್ಸ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !