ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಾಪ್ತರ ಮರಣದಂಡನೆ ಶಿಕ್ಷೆಗೆ ಕೊನೆ ಹಾಡಿದ ಸೌದಿ ಅರೇಬಿಯಾ

Last Updated 27 ಏಪ್ರಿಲ್ 2020, 12:18 IST
ಅಕ್ಷರ ಗಾತ್ರ

ಅಪ್ರಾಪ್ತರ ಅಪರಾಧಿಗಳಿಗೆ ಮರಣದಂಡನೆ ವಿಧಿಸುವುದನ್ನು ನಿಲ್ಲಿಸುವಂತೆ ಸೌದಿ ರಾಜ ಆದೇಶಿಸಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ರಾಪ್ತ ಅಪರಾಧಿಗಳಿಗೆ ಮರಣದಂಡನೆ ನೀಡಬಾರದು. ಬದಲಿಗೆ ಸೆರೆವಾಸ, ದಂಡ ಮತ್ತು ಸಮುದಾಯ ಸೇವೆಯಂಥ ಶಿಕ್ಷೆಗಳನ್ನು ನೀಡಬೇಕು ಎಂದು ಸೌದಿ ರಾಜ ಆದೇಶಿಸಿದ್ದು, ನ್ಯಾಯಾಧೀಶರು ಇನ್ನುಮುಂದೆ ಈ ಆದೇಶ ಪಾಲಿಸಬೇಕಾಗಿದೆ. ಈ ಮೂಲಕ ರಾಜಾಡಳಿತದ ಪ್ರಮುಖ ದೇಶವೊಂದು ವಿವಾದಿತ ಶಿಕ್ಷೆಗೆ ಅಂತ್ಯ ಹಾಡಿದೆ.

ಇನ್ನು ಮುಂದೆ ಪ್ರಕರಣಗಳನ್ನು ಪರಿಶೀಲಿಸುವಂತೆಯೂ, ಈಗಾಗಲೇ ಗರಿಷ್ಠ 10 ವರ್ಷ ಶಿಕ್ಷೆ ಪೂರ್ಣಗೊಳಿಸುವವರ ಶಿಕ್ಷೆಯನ್ನು ಕೈಬಿಡುವಂತೆಯೂ ರಾಜಾಜ್ಙೆ ಆದೇಶಿಸಿದೆ.

ರಾಜ ಸಲ್ಮಾನ್ ಅವರ ಪುತ್ರ ಮತ್ತು ಉತ್ತರಾಧಿಕಾರಿ, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ದೇಶದ ಕಾನೂನುಗಳನ್ನು ಉದಾರಗೊಳಿಸುತ್ತಿರುವುದರ ಹಿಂದಿನ ಶಕ್ತಿ ಎಂದು ಹೇಳಲಾಗಿದೆ. ಅಲ್ಲದೆ, ಈಗಲೂ ಬಹಳಷ್ಟು ರಾಷ್ಟ್ರಗಳು ಪಾಲಿಸುತ್ತಿರುವ ಇಸ್ಲಾಮಿನ ಅತ್ಯಂತ ಸಾಂಪ್ರದಾಯಿಕ ಕಾನೂನುಗಳಿಂದ ದೇಶವನ್ನು ದೂರಕ್ಕೆ ಒಯ್ಯುತ್ತಿರುವುದರ ಹಿಂದಿನ ವ್ಯಕ್ತಿ.

ಸೌದಿಯ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ದೇಶಕ್ಕೆ ಆಧುನಿಕತೆಯ ಸ್ಪರ್ಶ ನೀಡುತ್ತಿದ್ದಾರೆ. ವಿದೇಶಿ ಹೂಡಿಕೆ ಆಕರ್ಷಿಸುವ ಮೂಲಕ ದೇಶದ ಖ್ಯಾತಿಯನ್ನು ಜಾಗತಿಕವಾಗಿ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ವೇಳೆ, ಉದಾರವಾದಿಗಳ ಮೇಲಿನ ದಾಳಿ, ಮಹಿಳಾ ಹಕ್ಕುಗಳ ಹೋರಾಟಗಾರರು, ಬರಹಗಾರರು, ಸಮಾಜ ಸುಧಾರಕರ ಕಡೆಗೂ ಅವರು ಗಮನ ಹರಿಸುತ್ತಿದ್ದಾರೆ.

ಪತ್ರಕರ್ತ ಜಮಾಲ್‌ ಕಶೋಗ್ಗಿ ಅವರ ಕೊಲೆಯ ನಂತರ ಸೌದಿಯ ರಾಜ ಮನೆತನ ವಿಶ್ವದಾದ್ಯಂತ ಭಾರಿ ಟೀಕೆಗೆ ಗುರಿಯಾಗಿತ್ತು. ಆದರೆ, ಈ ಕೊಲೆಯಲ್ಲಿ ತನ್ನ ಪಾತ್ರವಿಲ್ಲ ಎಂದು ರಾಜಮನೆತನ ಸ್ಪಷ್ಟಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT