ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಮಾದಲ್ಲಿನ ವೈರಸ್ ಕಡಿಮೆ ಮಾಡಲು ವಿನೂತನ ವಿಧಾನ

ಅಮೆರಿಕದ ಸಿಎಸ್‌ಯು ವಿಜ್ಞಾನಿಗಳ ಸಂಶೋಧನೆ
Last Updated 1 ಜೂನ್ 2020, 1:53 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಪ್ಲಾಸ್ಮಾದಲ್ಲಿನ ಕೊರೊನಾ ವೈರಸ್‌ ಪ್ರಮಾಣ ಕಡಿಮೆ ಮಾಡುವ ವಿಧಾನಗಳನ್ನು ವಿಜ್ಞಾನಿಗಳು ರೂಪಿಸಿದ್ದಾರೆ.

ವಿಟಾಮಿನ್‌ ರಿಬೊಫ್ಲಾವಿನ್‌ ಮತ್ತು ನೇರಳಾತೀತ ಕಿರಣಗಳ ಮೂಲಕ ಮನುಷ್ಯರ ಪ್ಲಾಸ್ಮಾದಲ್ಲಿನ ವೈರಸ್‌ ಪ್ರಮಾಣ ಕಡಿಮೆ ಮಾಡಬಹುದು. ಇದರಿಂದ, ರಕ್ತವನ್ನು ವರ್ಗಾವಣೆ ಮಾಡುವಾಗ ವೈರಸ್‌ ಸೋಂಕಿನಿಂದ ಮುಕ್ತಗೊಳಿಸುವ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಪ್ರತಿಪಾದಿಸಿದ್ದಾರೆ.

ಅಮೆರಿಕದ ಕೊಲೊರಡೊ ಸ್ಟೇಟ್‌ ಯೂನಿವರ್ಸಿಟಿಯ (ಸಿಎಸ್‌ಯು) ವಿಜ್ಞಾನಿಗಳು ‘ಮಿರಾಸೋಲ್‌ ಪ್ಯಾಥೋಜೆನ್‌ ರೆಡಕ್ಷನ್‌ ಟೆಕ್ನಾಲಜಿ ಸಿಸ್ಟಂ’ ಎನ್ನುವ ಉಪಕರಣದ ಮೂಲಕ ಈ ಬಗ್ಗೆ ಸಂಶೋಧನೆಯನ್ನು ಕೈಗೊಂಡಿದ್ದಾರೆ. ಸಿಎಸ್‌ಯುನ ವಿಜ್ಞಾನಿ ರೇ ಗೂಡ್‌ರಿಚ್‌ ಈ ಉಪಕರಣವನ್ನು ಅಭಿವೃದ್ದಿಪಡಿಸಿದ್ದಾರೆ.

‘ನಮ್ಮ ಸಂಶೋಧನೆ ಸಂದರ್ಭದಲ್ಲಿ ಪಾಸ್ಮಾ ಮತ್ತು ರಕ್ತದಲ್ಲಿನ ವೈರಸ್‌ಗಳನ್ನು ಅಪಾರ ಪ್ರಮಾಣದಲ್ಲಿ ನಾಶಪಡಿಸಿದ್ದೇವೆ. ಚಿಕಿತ್ಸೆ ಬಳಿಕ ವೈರಸ್‌ಗಳು ಸಹ ಕಾಣಿಸಲಿಲ್ಲ’ ಎಂದು ಸಿಎಸ್‌ಯುನ ವಿಜ್ಞಾನಿ ಇಝಾಬೆಲಾ ರಗಾನ್‌ ವಿವರಿಸಿದ್ದಾರೆ.

‘ರಕ್ತವನ್ನು ಬೇರೆಯವರಿಗೆ ವರ್ಗಾಯಿಸುವ ಮೂಲಕ ಕೊರೊನಾ ವೈರಸ್‌, ಸಾರ್ಸ್‌ ಹಬ್ಬುತ್ತದೆ ಎನ್ನುವುದು ದೃಢಪಟ್ಟಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯಬೇಕಾಗಿದೆ‘ ಎಂದು ತಿಳಿಸಿದ್ದಾರೆ.

‘ವಿಶೇಷವಾಗಿ ವಿನ್ಯಾಸಗೊಳಿಸಿ ತಯಾರಿಸಿದ ಬ್ಯಾಗ್‌ನಲ್ಲಿ ರಕ್ತ ಅಥವಾ ಪ್ಲಾಸ್ಮಾವನ್ನು ಇಡಬೇಕು. ಇದಕ್ಕೆ ರಿಬೊಫ್ಲಾವಿನ್‌ ದ್ರವವವನ್ನು ಸೇರಿಸಲಾಗುತ್ತದೆ. ಬಳಿಕ ನಿಗದಿಪಡಿಸಿದ ಉಪಕರಣದಲ್ಲಿ ನೇರಾಳತೀತ ಕಿರಣಗಳನ್ನು ಹಾಯಿಸಲಾಗುತ್ತದೆ. ಆದರೆ, ಇದು ಮನೆಯಲ್ಲಿ ಮಾಡುವ ಪ್ರಯೋಗವಲ್ಲ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮೆರಾಸೋಲ್‌ ಉಪಕರಣದ ಬಳಕೆಗೆ ಯುರೋಪ್‌ ಮತ್ತು ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ದೇಶಗಳಲ್ಲಿ ಮಾತ್ರ ಒಪ್ಪಿಗೆ ನೀಡಲಾಗಿದೆ. ಅಮೆರಿಕದಲ್ಲಿ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT