ಸೆಷೆಲ್ಸ್‌ನಲ್ಲಿ ಭಾರತದ ನೌಕಾ ಕೇಂದ್ರ ಸ್ಥಾಪನೆಗೆ ಅನುಮತಿ ನಿರಾಕರಣೆ

7
ವಿರೋಧ ಪಕ್ಷಗಳಿಂದ ವಿರೋಧ

ಸೆಷೆಲ್ಸ್‌ನಲ್ಲಿ ಭಾರತದ ನೌಕಾ ಕೇಂದ್ರ ಸ್ಥಾಪನೆಗೆ ಅನುಮತಿ ನಿರಾಕರಣೆ

Published:
Updated:

ಸೆಷೆಲ್ಸ್‌: ‘ಇಲ್ಲಿನ ದ್ವೀಪವೊಂದರಲ್ಲಿ ಭಾರತದ ನೌಕಾಪಡೆ ಕೇಂದ್ರ ನಿರ್ಮಿಸುವ ಒಪ್ಪಂದಕ್ಕೆ ಅನುಮತಿ ನೀಡದಿರಲು ಸೆಷೆಲ್ಸ್‌ ಸಂಸತ್ತು ನಿರ್ಧಾರ ಕೈಗೊಂಡಿದೆ’ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೌಕಾಕೇಂದ್ರ ಸ್ಥಾಪ‍ನೆ ಸಂಬಂಧ ಭಾರತ ಹಾಗೂ ಸೆಷೆಲ್ಸ್ ಕಳೆದ ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ ಈ ಯೋಜನೆಗೆ ವಿರೋಧ ಪಕ್ಷದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು, ಅಲ್ಲದೇ ಸಾರ್ವಜನಿಕರು ಬೃಹತ್‌ ಪ್ರತಿಭಟನೆ ನಡೆಸಿದ್ದರು.

‘115 ದ್ವೀಪಗಳ ಪೈಕಿ ನೌಕಾಕೇಂದ್ರ ಸ್ಥಾಪನೆಯ ದ್ವೀಪವು ಅತಿ ಹೆಚ್ಚು ಕಾರ್ಯ ಒತ್ತಡದ ಜಲಮಾರ್ಗವೂ ಆಗಿದೆ. ಜಂಟಿ ಅಭಿವೃದ್ಧಿಯನ್ನು ಭಾರತಕ್ಕೆ ಬಿಟ್ಟು ಕೊಟ್ಟರೆ ದೇಶದ ಭೂಪ್ರದೇಶವನ್ನು ಆ ದೇಶದ ಸ್ವಾಧೀನಕ್ಕೆ ನೀಡಿದಂತಾಗುತ್ತದೆ. ಇದು ದೇಶದ ಸಾರ್ವಭೌಮತೆಗೆ ಸಮಸ್ಯೆ ತಂದೊಡ್ಡಲಿದೆ’ ಎಂದು ವಿರೋಧ ಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

‘ಸಂಸತ್ತಿನಲ್ಲಿ ಈ ಒಪ್ಪಂದವನ್ನು ಮಂಡಿಸದಿರಲು ಸರ್ಕಾರ ನಿರ್ಧರಿಸಿದೆ. ವಿರೋಧ ಪಕ್ಷದ ಬಹುತೇಕ ಸದಸ್ಯರು ಅನುಮೋದಿಸದಂತೆ ಸೂಚಿಸಿದ್ದಾರೆ’ ಎಂದು ಸೆಷೆಲ್ಸ್‌ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಬರ್ರಿ ಪೌರೆ ತಿಳಿಸಿದರು.

‘ಈ ಒಪ್ಪಂದ ರದ್ದುಗೊಳಿಸಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಆದರೆ ಅಧಿವೇಶನದಲ್ಲಿ ನಾವು ಈ  ಪ್ರಸ್ತಾವವನ್ನು ಮಂಡಿಸುವುದಿಲ್ಲ’ ಎಂದರು. 

ಮೋದಿ–ಡ್ಯಾನಿ ಭೇಟಿ: ಸೆಷೆಲ್ಸ್‌ ಅಧ್ಯಕ್ಷ ಡ್ಯಾನಿ ಫೌರೆ ಅವರು ಇದೇ ಭಾನುವಾರದಿಂದ ಭಾರತ ಪ್ರವಾಸ ಕೈಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಜೊತೆಗೂ ಮಾತುಕತೆ ನಡೆಸಲಿದ್ದಾರೆ.

ಈ ಬಗ್ಗೆ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡ್ಯಾನಿ ಫೌರೆ, ದ್ವೀಪರಾಷ್ಟ್ರದಲ್ಲಿ ನೌಕಾಸೇನಾ ಕೇಂದ್ರ ಸ್ಥಾಪಿಸುವ ಬಗ್ಗೆ ಮೋದಿ ಜೊತೆ ಚರ್ಚಿಸುವುದಿಲ್ಲ, ಆದರೆ, ಈ ಯೋಜನೆಯನ್ನು ಕೈಬಿಡಲಾಗಿದೆ’ ಎಂದು  ಸ್ಪಷ್ಟಪಡಿಸಿದರು.

ಆದರೆ, ಮುಂದಿನ ವರ್ಷದ ಬಜೆಟ್‌ನಲ್ಲಿ ಈ ಜಾಗದಲ್ಲಿ ಕರಾವಳಿಕಾವಲು ಕೇಂದ್ರ ಸ್ಥಾಪನೆಗೆ ಹಣ ನಿಗದಿಗೊಳಿಸಲಾಗುವುದು. ಇಲ್ಲಿ ಸೇನಾಕೇಂದ್ರ ಹೊಂದುವುದು ಸೆಷೆಲ್ಸ್‌ ಪಾಲಿಗೆ ಅತ್ಯಂತ ಮಹತ್ವದ್ದು’ ಎಂದು ಅವರು ವಿವರಿಸಿದರು.

ಒಪ್ಪಂದದ ಪ‍್ರಕಾರ, ಈ ದ್ವೀಪದಲ್ಲಿ ವಿಮಾನರನ್‌ವೇ, ಬಂದರು ನಿರ್ಮಾಣಕ್ಕೆ ಭಾರತ ಸರ್ಕಾರ ಯೋಜನೆ ರೂಪಿಸಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !