ಶನಿವಾರ, ಡಿಸೆಂಬರ್ 7, 2019
25 °C

ಚಾಪ್‍ ಸ್ಟಿಕ್ ಬಳಸುವುದು ಹೇಗೆ ಎಂದು ಮೋದಿಗೆ ಕಲಿಸಿದ ಜಪಾನ್ ಪ್ರಧಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಟೋಕಿಯೊದಲ್ಲಿ ಸೋಮವಾರ ಭಾರತ- ಜಪಾನ್ ನಡುವಣ 13ನೇ ಶೃಂಗಸಭೆ ನಡೆಯಲಿದೆ, ಅದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಪಾನ್ ತಲುಪಿದ್ದಾರೆ.

ಮೋದಿಯವರಿಗೆ ಜಪಾನ್ ಪ್ರಧಾನಿ ಶಿಂಜೊ ಅಬೆ ತಮ್ಮ ರಜಾಕಾಲದ ಮನೆಯಲ್ಲಿ ಆತಿಥ್ಯ ನೀಡಿದ್ದು, ಶಿಬೆ ಬಗ್ಗೆ ಹೇಳುವುದಾರೆ ಅವರೊಬ್ಬ 'ವಿಶ್ವಾಸರ್ಹ ಗೆಳೆಯ' ಎಂದು ಮೋದಿ ಹೇಳಿದ್ದಾರೆ.

ಅಬೆ ಅವರ ಆತಿಥ್ಯವನ್ನು ಮೆಚ್ಚಿದ ಮೋದಿ, ಮನೆಯಲ್ಲಿ ಆತಿಥ್ಯ ನೀಡುವುದರ ಜತೆಗೆ ಚಾಪ್ ಸ್ಟಿಕ್ ಬಳಸುವುದು ಹೇಗೆ ಎಂಬುದನ್ನು ಕಲಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

ಪ್ರೀತಿಯಿಂದ ನೀಡಿದ ಆತಿಥ್ಯಕ್ಕೆ ಧನ್ಯವಾದಗಳು. ಪ್ರಧಾನಿ ಅಬೆ ಅವರು ಚಾಪ್ ಸ್ಟಿಕ್ ಬಳಸಿ ಜಪಾನಿನ ಆಹಾರವನ್ನು ಹೇಗೆ ತಿನ್ನುವುದು ಎಂದು ಕಲಿಸಿಕೊಟ್ಟಿದ್ದಾರೆ ಎಂದು  ಮೋದಿ ಟ್ವೀಟಿಸಿದ್ದಾರೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು