ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO| 14 ಸಾವಿರ ಕುರಿಗಳನ್ನು ಸಾಗಿಸುತ್ತಿದ್ದ ಹಡಗು ಮುಳುಗಡೆ: 32 ಕುರಿ ರಕ್ಷಣೆ!

Last Updated 25 ನವೆಂಬರ್ 2019, 7:27 IST
ಅಕ್ಷರ ಗಾತ್ರ

ಬುಕರೆಸ್ಟ್‌(ರೊಮೇನಿಯಾ): ರೋಮೆನಿಯಾದ ಕಾನ್‌ಸ್ಟಾಂಟಾ ಸಮುದ್ರ ತೀರದಲ್ಲಿ ಭಾನುವಾರ ಹಡಗು ದುರಂತವೊಂದು ಸಂಭವಿಸಿದೆ. 14 ಸಾವಿರಕ್ಕೂ ಹೆಚ್ಚು ಕುರಿಗಳನ್ನು ಸಾಗಿಸುತ್ತಿದ್ದ ಬೃಹತ್‌ ಹಡಗೊಂದು ಸಮುದ್ರದಲ್ಲಿ ಮುಳುಗಿದೆ.

ದಿ ಕ್ವೀನ್‌ ಹಿಂಡ್‌ ಹೆಸರಿನ ಬೃಹತ್‌ ಹಡಗು ಕಾನ್‌ಸ್ಟಾಂಟಾ ಕರಾವಳಿಯ ಮಿದಿಯಾ ಬಂದರಿನಿಂದ 14 ಸಾವಿರಕ್ಕೂ ಹೆಚ್ಚು ಕುರಿಗಳನ್ನು ಹೊತ್ತು ಸೌದಿ ಅರೇಬಿಯಾದ ಜೇದ್‌ಗೆ ಭಾನುವಾರ ಪ್ರಯಾಣ ಆರಂಭಿಸಿತು.

ಯಾನ ಆರಂಭವಾದ ಕೆಲ ಹೊತ್ತಿನಲ್ಲೇ ಹಡಗು ನೀರನಿನಲ್ಲಿ ಮುಳುಗಲಾರಂಭಿಸಿತು. ದುರಂತ ಸಂಭವಿಸಿದ ಕೂಡಲೇ ಪೊಲೀಸರು, ಸ್ಥಳೀಯ ಮುಳುಗು ತಜ್ಞರು ಮತ್ತು ಕೋಸ್ಟ್‌ ಗಾರ್ಡ್‌ಗಳು ಕುರಿಗಳ ರಕ್ಷಣಾ ಕಾರ್ಯ ಆರಂಭಿಸಿದರು. ಆದರೆ, 32 ಕುರಿಗಳನ್ನು ಮಾತ್ರ ರಕ್ಷಿಸಲಾಗಿದೆ, ಇನ್ನುಳಿದ ಕುರಿಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿವೆ ಎಂದು ಹೇಳಲಾಗಿದೆ. ಇದೇ ವೇಳೆ ಹಡಗಿನ 22 ಸಿಬ್ಬಂದಿಗಳನ್ನೂ ರಕ್ಷಿಸಲಾಗಿದೆ.

ಹಡಗು ದುರಂತಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಘಟನೆ ಸಂಬಂಧ ರೊಮೇನಿಯಾ ಸರ್ಕಾರ ತನಿಖೆಗೆ ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT