ಶುಕ್ರವಾರ, ಜೂನ್ 18, 2021
27 °C

ಫುಟ್‌ಬಾಲ್ ನೋಡುತ್ತಿದ್ದವರ ಮೇಲೆ ಗುಂಡಿನ ದಾಳಿ, ನಾಲ್ವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದ ಫ್ರೆಸ್ನೊ ನಗರದಲ್ಲಿ ಅಪರಿಚಿತ ಶಂಕಿತರು ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ಕು ಜನರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.

ಸೀಸರ್ ಅವೆನ್ಯೂ ಬಳಿಯ ಈಸ್ಟ್ ಲಮೋನಾ ಅವೆನ್ಯೂದ 5300 ಬ್ಲಾಕ್‌ನಲ್ಲಿರುವ ಮನೆಯ ಹಿತ್ತಲಿನಲ್ಲಿ ಭಾನುವಾರ ರಾತ್ರಿ 10 ಜನರಿಗೆ ಗುಂಡು ಹಾರಿಸಲಾಗಿದೆ ಎಂದು ಫ್ರೆಸ್ನೋ ಪೊಲೀಸರು ತಿಳಿಸಿದ್ದಾರೆ ಎಂದು ದಿ ಫ್ರೆಸ್ನೊ ಬೀ ವರದಿ ಮಾಡಿದೆ.

ಇದೊಂದು ಸಾಮೂಹಿಕ ಗುಂಡಿನ ದಾಳಿಯಾಗಿದ್ದು, ಅಪರಿಚಿತ ಶಂಕಿತರು ಮನೆಯ ಹಿತ್ತಲಿಗೆ ನುಸುಳಿದ್ದಾರೆ ಮತ್ತು ಏಕಾಏಕಿ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಫ್ರೆಸ್ನೋ ಪೊಲೀಸ್ ಲೆಫ್ಟಿನೆಂಟ್ ಬಿಲ್ ಡೂಲೆ ತಿಳಿಸಿದ್ದಾರೆ.

ಕುಟುಂಬದವರು ಮತ್ತು ಸ್ನೇಹಿತರು ಒಂದೆಡೆ ಸೇರಿ ಮನೆಯ ಹಿತ್ತಲಿನಲ್ಲಿ ಪಾರ್ಟಿ ಮಾಡುತ್ತ ಫುಟ್‌ಬಾಲ್ ಪಂದ್ಯವನ್ನು ನೋಡುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ಬಂದು ನೋಡಿದಾಗ ಹಿತ್ತಲಿನಲ್ಲಿ ಹಲವರು ಸತ್ತು ಬಿದ್ದಿದ್ದರು ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು