ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇ: ಗಾಂಧಿ ಸ್ಮರಣೆಗೆ ‘ಶಾಂತಿ ನಡಿಗೆ’

2020ರ ಜನವರಿ ತನಕ ಕಾರ್ಯಕ್ರಮ ಆಯೋಜನೆ
Last Updated 30 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ದುಬೈ: ಮಹಾತ್ಮ ಗಾಂಧಿಯ 150ನೇ ಜನ್ಮವರ್ಷಾಚರಣೆ ಸಲುವಾಗಿ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅ.2ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. 2020ರ ಜನವರಿ ತನಕ ಈ ಕಾರ್ಯಕ್ರಮಗಳು ನಡೆಯಲಿವೆ.

ಖಲೀಜ್ ಟೈಮ್ಸ್ ಈ ವಿಷಯ ವರದಿ ಮಾಡಿದೆ.

4 ಕಿ.ಮೀ ದೂರ ಕ್ರಮಿಸುವ ‘ಶಾಂತಿ ನಡಿಗೆ’ಗೆ ಇಲ್ಲಿನ ಝಬೀಲ್ ಪಾರ್ಕ್‌ನಲ್ಲಿ ಅ.2ರಂದು ಚಾಲನೆ ನೀಡಲಾಗುತ್ತದೆ. ವಿಜೇತರಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳಲು ವಿಮಾನದ ಟಿಕೆಟ್ ಬಹುಮಾನವಾಗಿ ದೊರಕಲಿದೆ. ಅ.4ರಂದು ಅಜ್ಮಾನ್‌ನ ಭಾರತೀಯ ಒಕ್ಕೂಟ ಸೈಕಲ್ ರ್‍ಯಾಲಿ ಆಯೋಜಿಸಲಿದೆ.

ಅ.5ರಂದು ಭಾರತೀಯ ಉದ್ದಿಮೆ ಮತ್ತು ಔದ್ಯೋಗಿಕ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಅ.17ರಂದು ಗಾಂಧೀಜಿ ಕುರಿತು ಉಪನ್ಯಾಸ ನೀಡಲಿದ್ದಾರೆ.

ಭಾರತೀಯ ಭಾಷಾ ಉತ್ಸವ ಆಚರಣೆ: ನ.8ರಿಂದ ಡಿ.20ರವರೆಗೆ ಪ್ರತಿ ಶುಕ್ರವಾರ ಭಾರತೀಯ ಭಾಷಾ ಉತ್ಸವ ಆಯೋಜಿಸಲಾಗುತ್ತದೆ. ಭಾರತೀಯ ರಾಯಭಾರ ಕಚೇರಿ, ಗಾಂಧೀಜಿಯ 100 ಭಾವಚಿತ್ರಗಳ ಪ್ರದರ್ಶನ ಸಹ ಏರ್ಪಡಿಸಲಿದೆ. ಜ.10ರಂದು ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.

ಭಾರತೀಯ ಭಾಷಾ ಉತ್ಸವ ಆಚರಣೆ

ನ.8ರಿಂದ ಡಿ.20ರವರೆಗೆ ಪ್ರತಿ ಶುಕ್ರವಾರ ಭಾರತೀಯ ಭಾಷಾ ಉತ್ಸವ ಆಯೋಜಿಸಲಾಗುತ್ತದೆ. ಭಾರತೀಯ ರಾಯಭಾರ ಕಚೇರಿ, ಗಾಂಧೀಜಿಯ 100 ಭಾವಚಿತ್ರಗಳ ಪ್ರದರ್ಶನ ಸಹ ಏರ್ಪಡಿಸಲಿದೆ. ಜ.10ರಂದು ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.

ಆಧ್ಯಾತ್ಮಿಕ ಮೌಲ್ಯ ನೀಡಿದ ಗಾಂಧೀಜಿ

‘ಗಾಂಧೀಜಿ ಕೇವಲ ಭಾರತೀಯರಿಗಷ್ಟೆ ಸ್ಫೂರ್ತಿಯ ಸೆಲೆಯಾಗಿಲ್ಲ. ಇಡೀ ವಿಶ್ವಕ್ಕೆ ಆಧ್ಯಾತ್ಮಿಕ ಮೌಲ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ’ ಎಂದು ಚೀನಾ ಹೇಳಿದೆ.

‘ಚೀನಾ ಮತ್ತು ಭಾರತ ಸುಖ, ದುಃಖದಲ್ಲಿ ಸಹಯಾನಿಗಳು’ ಎನ್ನುವ ಗಾಂಧೀಜಿಯ ಹೇಳಿಕೆಯನ್ನು ಉಲ್ಲೇಖಿಸಿದ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶ್ವಾಂಗ್ ಅವರು, ‘ಭಾರತದ ಜತೆಗೆ ರಾಜಕೀಯವಾಗಿ ಪರಸ್ಪರ ನಂಬಿಕೆ ಹಾಗೂ ಸಹಕಾರ ಹೆಚ್ಚಿಸಿಕೊಳ್ಳಲು ಚೀನಾ ಬಯಸುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT