ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾದ ಚರ್ಚ್‌ ಪಾದ್ರಿಗೆ #MeToo ಪ್ರಕರಣದಲ್ಲಿ 15 ವರ್ಷ ಜೈಲು ಶಿಕ್ಷೆ

Last Updated 23 ನವೆಂಬರ್ 2018, 2:21 IST
ಅಕ್ಷರ ಗಾತ್ರ

ಸೋಲ್‌(ದಕ್ಷಿಣ ಕೋರಿಯಾ):#MeToo ಆರೋಪ ಪ್ರಕರಣದಲ್ಲಿ ದಕ್ಷಿಣ ಕೊರಿಯಾದ ಪ್ರಮುಖ ಚರ್ಚ್‌ನ ಪಾದ್ರಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿ ಗುರುವಾರ ಇಲ್ಲಿನ ನ್ಯಾಯಾಲಯ ಆದೇಶಿಸಿದೆ.

ಸಿಯೋಲ್‌ನಲ್ಲಿನ ಮನ್ಮಿನ್‌ ಸೆಂಟ್ರಲ್‌ ಚರ್ಚ್‌ನ ಸಂಸ್ಥಾಪಕ 75 ವರ್ಷ ವಯಸ್ಸಿನ ಲೀ ಜೇ–ರಾಕ್‌ ಶೀಕ್ಷೆಗೆ ಗುರಿಯಾದ ಪಾದ್ರಿ.

ಅತ್ಯಾಚಾರ ಆರೋಪ ಕೇಳಿಬಂದ ಬಳಿಕ ಪಾದ್ರಿಯ ವರ್ತನೆ ಕುರಿತು ತನಿಖೆ ನಡೆಸಲಾಗಿದ್ದು, ಈ ಶಿಕ್ಷೆ ವಿಧಿಸಲಾಗಿದೆ.

ದೇವರೆಂದು ನಂಬಿಸಿ ಅತ್ಯಾಚಾರ
ಚರ್ಚ್‌ನ ಅನುಯಾಯಿಗಳಿಗೆ ಪಾದ್ರಿ ತಾನು ದೈವಿಕ ಶಕ್ತಿಯ ದೇವರ ಅಂಶವೆಂದು ನಂಬಿಸಿ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿ ದೂರುಗಳು ಬಂದಿದ್ದವು. ದೂರುಗಳನ್ನು ಆಧರಿಸಿ ತನಿಖೆ ನಡೆಸಲಾಗಿತ್ತು.

ವಂಚನೆ ಮತ್ತು ಲೈಂಗಿಕ ದುರುಪಯೋಗ ಮಾಡಿರುವುದಾಗಿ ಪ್ರಮುಖ ಕ್ರೈಸ್ತ ಸಮಾಜದ ಗುಂಪು ಆರೋಪಿಸಿತ್ತು. ಆದರೆ, MeToo ಅಭಿಯಾನ ಆರಂಭವಾಗುವ ಮುನ್ನವೇ ಈ ವರ್ಷದ ಆರಂಭದಲ್ಲೇ ದಕ್ಷಿಣ ಕೊರಿಯಾದಲ್ಲಿ ಪಾದ್ರಿಯನ್ನು ಬಂಧಿಸಲಾಗಿತ್ತು ಎಂದು ವರದಿಯಾಗಿದೆ.

MeToo ಅಭಿಯಾನದಿಂದ ಪ್ರೇರಿತರಾದ ಎಂಟು ಮಾಜಿ ಮಹಿಳಾ ಅನುಯಾಯಿಗಳು ಲೀ ಜೇ–ರಾಕ್‌ ವಿರುದ್ಧ ಮೊಕದ್ದಮೆ ಹೂಡಿದ್ದರು. ಕೆಲವರು ನೀಡಿರುವ ಹೇಳಿಕ ಪ್ರಕಾರ, ಪಾದ್ರಿ ತಮ್ಮ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದಿದ್ದರು. ಈ ವೇಳೆ ಬಟ್ಟೆಗಳನ್ನು ಕಳಚಿ ನಗ್ನವಾಗುವಂತೆ ಸೂಚಿಸುತ್ತಿದ್ದರು, ಬಳಿಕ ಅತ್ಯಾಚಾರ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪಾದ್ರಿಯನ್ನು ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು.

2000ದಿಂದ 2014ರ ಮಧ್ಯೆ ಪಾದ್ರಿ ಎಂಟು ಮಹಿಳೆಯರ ಮೇಲೆ ಡಜನ್‌ಗೂ ಅಧಿಕ ಬಾರಿ ಅತ್ಯಾಚಾರ ಎಸಗಿದ್ದಾರೆ ಎಂಬ ದೋಷಾರೋಪದ ಮೇಲೆ ಶಿಕ್ಷೆ ವಿಧಿಸಿ ಸೊಲ್‌ನ ಸೆಂಟ್ರಲ್‌ ಡಿಸ್ಟ್ರಿಕ್ಟ್‌ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಗುರುವಾರ ಈ ತೀರ್ಪು ನೀಡಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT