ಮಂಗಳವಾರ, ಡಿಸೆಂಬರ್ 10, 2019
20 °C

ಪ್ರವಾಹಕ್ಕೆ ತತ್ತರಿಸಿದ ವೆನಿಸ್‌: ತುರ್ತು ಪರಿಸ್ಥಿತಿ ಘೋಷಣೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವೆನಿಸ್‌: ಭೀಕರ ಪ್ರವಾಹದಿಂದಾಗಿ ತತ್ತರಿಸಿರುವ ವೆನಿಸ್‌ನಲ್ಲಿ ಸರ್ಕಾರ ಗುರುವಾರ ತುರ್ತುಪರಿಸ್ಥಿತಿ ಘೋಷಿಸಿದೆ.

ಪ್ರವಾಹದಿಂದಾಗಿ ನಗರದ ಚರ್ಚ್‌ಗಳು, ಅಂಗಡಿ, ಮನೆಗಳ ಒಳಗೆ ನೀರು ನುಗ್ಗಿದೆ. ಹಲವು ಮ್ಯೂಸಿಯಂಗಳನ್ನು ಗುರುವಾರವೂ ಸಾರ್ವಜನಿಕರಿಗೆ ಮುಚ್ಚಲಾಗಿತ್ತು.

ಪ್ರವಾಹದಲ್ಲೂ ಸೆಲ್ಫಿ!: ಪ್ರವಾಹದಿಂದಾಗಿ ಪ್ರಸಿದ್ಧ ಪ್ರವಾಸಿತಾಣ ಸೇಂಟ್‌ ಮಾರ್ಕ್ಸ್‌ ಸ್ಕ್ವೇರ್‌ ಅರ್ಧ ಮುಳುಗಿದ್ದು, ಪ್ರವಾಸಿಗರು ಪ್ಲಾಸ್ಟಿಕ್‌ ದೋಣಿಗಳಲ್ಲಿ ತೆರಳಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು.

ಆಸ್ಟ್ರಿಯನ್‌ ಪ್ರವಾಸಿಗ ಕಾರ್ನೆಲಿಯಾ ಲಿಟ್ಸ್‌ಚೌರ್, ‘ವೆನಿಸ್‌ನ ಪ್ರಸಿದ್ಧ ಸ್ಕ್ವೇರ್‌ ಅರ್ಧ ಮುಳುಗಡೆ ಆಗಿರುವುದನ್ನು ನೋಡಿದರೆ ಮಿಶ್ರ ಭಾವ ಉಂಟಾಗುತ್ತದೆ. ಪ್ರವಾಸಿಗರಿಗೆನೋ ಇದೂ ಒಂದೂ ಹೊಸ ಅನುಭವ ನೀಡುತ್ತದೆ ಆದರೆ, ಇಲ್ಲೇ ವಾಸಿಸುವವರಿಗೆ ಇದು ನಿಜಕ್ಕೂ ತೊಂದರೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು