ಲಂಡನ್‌ನಲ್ಲಿರುವ ಐತಿಹಾಸಿಕ ‘ಇಂಡಿಯಾ ಕ್ಲಬ್‌’ ನೆಲಸಮಕ್ಕೆ ತಡೆ

7

ಲಂಡನ್‌ನಲ್ಲಿರುವ ಐತಿಹಾಸಿಕ ‘ಇಂಡಿಯಾ ಕ್ಲಬ್‌’ ನೆಲಸಮಕ್ಕೆ ತಡೆ

Published:
Updated:

ಲಂಡನ್‌: ಭಾರತ ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಭಾರತೀಯರು ಒಂದೆಡೆ ಸೇರುವ ತಾಣವಾಗಿದ್ದ, ಇಲ್ಲಿನ ಐತಿಹಾಸಿಕ ‘ಇಂಡಿಯಾ ಕ್ಲಬ್‌’ ಅನ್ನು ನೆಲಸಮಗೊಳಿಸುವುದಕ್ಕೆ ನಗರಾಡಳಿತ ಅನುಮತಿ ನಿರಾಕರಿಸಿದೆ.

ಇಂಡಿಯಾ ಕ್ಲಬ್‌ ಕಟ್ಟಡವನ್ನು ನೆಲಸಮಗೊಳಿಸಿ, ಆ ಸ್ಥಳದಲ್ಲಿ ಐಷಾರಾಮಿ ಹೋಟೆಲ್‌ ನಿರ್ಮಿಸಲು ಮಾರ್ಸ್ಟನ್‌ ಪ್ರಾಪರ್ಟೀಸ್‌ ಸಂಸ್ಥೆ ಉದ್ದೇಶಿಸಿತ್ತು. ಆದರೆ, ಮಂಗಳವಾರ ಸಭೆ ನಡೆಸಿದ ವೆಸ್ಟ್‌ಮಿನಸ್ಟರ್‌ ಸಿಟಿ ಕೌನ್ಸಿಲ್‌ನ ಯೋಜನಾ ಕಮಿಟಿ, ಈ ಕಟ್ಟಡವನ್ನು ನೆಲಸಮಗೊಳಿಸುವುದಕ್ಕೆ ಅನುಮತಿ ನೀಡದಿರಲು ನಿರ್ಧರಿಸಿತು.

‘ಇಂಡಿಯಾ ಕ್ಲಬ್‌ ಪ್ರಮುಖ ಸಾಂಸ್ಕೃತಿಕ ಸಂಸ್ಥೆ. ಇಲ್ಲಿರುವ ಭಾರತೀಯ ಸಮುದಾಯದೊಂದಿಗೆ ಕ್ಲಬ್ ಐತಿಹಾಸಿಕ ಬಾಂಧವ್ಯ ಹೊಂದಿದ್ದು, ದೇಶದ ಸಾಂಸ್ಕೃತಿಕ ವೈವಿಧ್ಯತೆಗೆ ಮಹತ್ವದ ಕೊಡುಗೆ ನೀಡಿದೆ’ ಎಂದು ಕಮಿಟಿ ಅಭಿಪ್ರಾಯಪಟ್ಟಿದೆ.

ಈ ಐತಿಹಾಸಿಕ ಕಟ್ಟಡವನ್ನು ರಕ್ಷಿಸುವ ಸಂಬಂಧ ಆರಂಭಿಸಿದ್ದ ‘ಸೇವ್‌ ಇಂಡಿಯಾ ಕ್ಲಬ್‌’ ಎಂಬ ಆನ್‌ಲೈನ್‌ ಆಂದೋಲನಕ್ಕೆ 26 ಸಾವಿರ ಜನರು ಸಹಿ ಹಾಕಿ, ಬೆಂಬಲ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !