ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ 'ಡಬ್ಬ' ಪರೀಕ್ಷೆ: ವಿದೇಶದಲ್ಲೂ ವೈರಲ್‌

Last Updated 26 ಅಕ್ಟೋಬರ್ 2019, 7:12 IST
ಅಕ್ಷರ ಗಾತ್ರ

ಬೆಂಗಳೂರು: ಹಾವೇರಿಯಭಗತ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬ ಹಾಕಿ ಪರೀಕ್ಷೆ ಬರೆಸಿದ್ದ ಸುದ್ದಿ ಬಿಬಿಸಿ, ಸಿಎನ್‌ಎನ್‌ ಸೇರಿದಂತೆ ವಿದೇಶಿಮಾಧ್ಯಮಗಳಲ್ಲೂ ಭಾರಿಸದ್ದು ಮಾಡಿದೆ.

ಕಾಲೇಜಿನ ಆಡಳಿತಮಂಡಳಿಪರೀಕ್ಷೆಯಲ್ಲಿನ ನಕಲು ತಡೆಯುವ ಸಲುವಾಗಿವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬ ಹಾಕಿ ಪರೀಕ್ಷೆ ಬರೆಸಿತ್ತು.ರಟ್ಟಿನ ಡಬ್ಬ ಹಾಕಿಕೊಂಡು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಪರೀಕ್ಷಾ ಪ್ರಕ್ರಿಯೆ ಭಿನ್ನವಾಗಿರಬೇಕು ಹಾಗೂ ಯಾವುದೇ ಕಾರಣಕ್ಕೂ ನಕಲಿಗೆ ಅವಕಾಶ ನೀಡಬಾರದು ಎನ್ನುವ ಉದ್ದೇಶದೊಂದಿಗೆ ಈ ಪ್ರಯೋಗ ಮಾಡಲಾಗಿತ್ತು ಎಂದು ಆಡಳಿತ ಮಂಡಳಿ ಹೇಳಿತ್ತು. ಈ ಘಟನೆ ಕುರಿತಂತೆಹಾವೇರಿಯ ಜಿಲ್ಲಾಧಿಕಾರಿಗಳು ಕಾಲೇಜಿನ ಮಾನ್ಯತೆಯನ್ನು ರದ್ದು ಮಾಡುವುದಾಗಿ ಹೇಳಿದರು. ನಂತರದ ದಿನಗಳಲ್ಲಿ ಕಾಲೇಜಿನ ಆಡಳಿತ ಮಂಡಳಿಯು ಕ್ಷಮೆಯಾಚಿಸಿತ್ತು.

ತಲೆಗೆ ರಟ್ಟಿನ ಡಬ್ಬಿ ಹಾಕಿ ಪರೀಕ್ಷೆ ಬರೆಸಿದ್ದ ಸುದ್ದಿ ವಿದೇಶಗಳಲ್ಲೂವೈರಲ್‌ ಆಗಿದೆ.ಕಳೆದೊಂದು ವಾರದಿಂದ ವಿದೇಶಗಳಲ್ಲಿನ ಪ್ರಮುಖಸುದ್ದಿ ಸಂಸ್ಥೆಗಳು ಈ ಸುದ್ದಿಯನ್ನು ಪ್ರಕಟಿಸಿವೆ. ಅಲ್ಲದೇ, ಈ ಸುದ್ದಿಯನ್ನು ಫಾಲೋಅಫ್‌ಮಾಡಿ ಕಾಲೇಜಿನ ಆಡಳಿತ ಮಂಡಳಿ ಕ್ಷಮೆ ಕೋರಿರುವ ಸುದ್ದಿಯನ್ನು ಪ್ರಕಟಿಸಿರುವುದು ವೀಶೇಷ.

ಅಮೆರಿಕದ ಸಿಎನ್‌ಎನ್‌ ಮಾಧ್ಯಮ ಸಂಸ್ಥೆಯ ಸುದ್ದಿ ವಾಹಿನಿ, ಆನ್‌ಲೈನ್‌ ತಾಣದಲ್ಲೂ ಈ ಸುದ್ದಿ ಪ್ರಕಟವಾಗಿದೆ.ಕಳೆದ 7 ದಿನಗಳ ಹಿಂದೆ ಬಿಬಿಸಿ ಸುದ್ದಿವಾಹಿನಿ ಈ ಸ್ಟೋರಿಯನ್ನು ಕವರ್ ಮಾಡಿದೆ.

ಬ್ರಿಟನ್‌ ದೇಶದಡೈಲಿ ಮೇಲ್‌, ಇಂಡಿಪೆಂಡೆಂಟ್‌ ಡಿಜಿಟಲ್‌ ತಾಣ,ಅಮೆರಿಕದ ಸಿಎನ್‌ಎನ್‌, ಸಿ39 ಹೂಸ್ಟನ್‌, ನ್ಯೂಸ್‌ ವೀಕ್‌, ಎಬಿಸಿ6, ನ್ಯೂಜಿಲೇಂಡ್‌ನ ನ್ಯೂಸ್‌ಹಬ್‌, ನ್ಯೂಸ್‌ ವಿವ್ಯೂ, ಆಸ್ಟ್ರೇಲಿಯಾದ ಹನಿನೈನ್‌, ಮಲೇಶಿಯಾದ ಎನ್‌ಎಸ್‌ಟಿ ವೆಬ್‌ತಾಣ, ಪಾಕಿಸ್ತಾನದ ಜಿಯೊ ಹಾಗೂ ಗಲ್ಪ್‌ ನ್ಯೂಸ್‌ ಸೇರಿದಂತೆ ಕೆನಡಾ, ಆಫ್ರಿಕಾ ಹಾಗೂ ಯುರೋಪ್‌ ದೇಶಗಳಲ್ಲಿ ರಾಜ್ಯದ ಈ ಸುದ್ದಿ ವೈರಲ್‌ ಆಗಿದೆ.

ಶಿಕ್ಷಣ ವಿಭಾಗದಲ್ಲಿ ಆಧ್ಯತೆಯ ಮೇರೆಗೆ ಈ ಸುದ್ದಿಯನ್ನು ಪ್ರಕಟಿಸಲಾಗಿದೆ. ವಿದೇಶಗಳಲ್ಲಿ ಈ ಸುದ್ದಿ ಪ್ರಕಟವಾಗಿರುವ ಕೆಲವು ಲಿಂಕ್‌ಗಳನ್ನು ಈ ಕೆಳಗೆ ನೀಡಲಾಗಿದೆ.

ಬಿಬಿಸಿ:https://bbc.in/31LCHOj

ಸಿಎನ್‌ಎನ್‌:https://cnn.it/2p3jUAV

ಡೈಲಿಮೇಲ್‌:https://dailym.ai/2WgJBKv

ನ್ಯೂಸ್‌ವೀಕ್‌:https://bit.ly/2BGsiZM

ಜಿಯೊ ಟಿವಿ:https://bit.ly/342v33v

ಮಲೇಶಿಯಾ ಎನ್‌ಎಸ್‌ಟಿ:https://bit.ly/2MKX61E

ಎಬಿಸಿ6:https://bit.ly/2Pkz7bp

ನ್ಯೂಸ್‌ಹಬ್‌:https://bit.ly/31OkrUk

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT