ಶುಕ್ರವಾರ, ಆಗಸ್ಟ್ 23, 2019
25 °C

ಕಾಬೂಲ್‌: ಬಾಂಬ್‌ ಸ್ಫೋಟದಲ್ಲಿ 14 ಮಂದಿ ಸಾವು

Published:
Updated:
Prajavani

ಕಾಬೂಲ್‌: ಪಶ್ಚಿಮ ಕಾಬೂಲ್‌ನಲ್ಲಿ ಬುಧವಾರ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಹತ್ತು ನಾಗರಿಕರು ಮತ್ತು ನಾಲ್ಕು ಪೊಲೀಸರು ಸೇರಿದಂತೆ 14 ಮಂದಿ ಮೃತರಾಗಿದ್ದಾರೆ. 

ಪೊಲೀಸ್ ಕಾಂಪೌಂಡ್‌ ಸಮೀಪವೇ ಈ ಘಟನೆ ನಡೆದಿದ್ದು, 145 ಮಂದಿ ಗಾಯಗೊಂಡಿದ್ದಾರೆ. 

ಕಾರ್‌ ಬಾಂಬ್‌ ದಾಳಿಯಿಂದ ಈ ಸ್ಫೋಟ ಉಂಟಾಗಿದೆ ಎಂದು ಅಫ್ಗಾನ್‌ ಆಂತರಿಕ ಸಚಿವಾಲಯ ತಿಳಿಸಿದೆ. ಆದರೆ, ದಾಳಿಯ ಹೊಣೆ ಹೊತ್ತಿರುವ ತಾಲಿಬಾನ್‌ ಇದು ಟ್ರಕ್‌ ಬಾಂಬ್‌ ದಾಳಿ ಎಂದು ಹೇಳಿದೆ. ಅಫ್ಗಾನ್‌ ಭದ್ರತಾ ಪಡೆ ಸಿಬ್ಬಂದಿಗಳೂ ಇದು ಟ್ರಕ್‌ ಬಾಂಬ್‌ ಸ್ಫೋಟ ಎಂದು ಮಾಹಿತಿ ನೀಡಿದ್ದಾರೆ. 

18 ವರ್ಷಗಳ ಯುದ್ಧಕ್ಕೆ ಅಂತ್ಯ ಹಾಡಲು ಅಮೆರಿಕ ಜತೆ ಶಾಂತಿ ಮಾತುಕತೆ ನಡೆಸುತ್ತಿರುವ ತಾಲಿಬಾನ್‌, ಆಗಾಗೆ ಇಂತಹ ದಾಳಿ ಮುಂದುವರಿಸಿದೆ.  ಕಳೆದ ಒಂದು ತಿಂಗಳಿನಿಂದ ಉಗ್ರರು ನಡೆಸುತ್ತಿರುವ ದಾಳಿಯಲ್ಲಿ 1,500 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

Post Comments (+)