ಮಂಗಳವಾರ, ಸೆಪ್ಟೆಂಬರ್ 24, 2019
29 °C

ಆತ್ಮಾಹುತಿ ಬಾಂಬ್‌ ದಾಳಿಗೆ 10 ಬಲಿ

Published:
Updated:
Prajavani

ಕಾಬೂಲ್‌(ಎಪಿ): ಇಲ್ಲಿನ ರಾಯಭಾರ ಕಚೇರಿಗಳಿರುವ ಪ್ರದೇಶದಲ್ಲಿ ತಾಲಿಬಾನ್‌ ಉಗ್ರರು ಗುರುವಾರ ನಡೆಸಿದ ಆತ್ಮಾಹುತಿ ಕಾರ್‌ ಬಾಂಬ್‌ ದಾಳಿಗೆ ಕನಿಷ್ಠ 10 ಮಂದಿ ನಾಗರಿಕರು ಬಲಿಯಾಗಿದ್ದಾರೆ.

‘ಅಮೆರಿಕದ ರಾಯಭಾರ ಕಚೇರಿ ಸಮೀಪ ಸ್ಫೋಟ ಸಂಭವಿಸಿದ್ದು, 42 ಮಂದಿ ಗಾಯಗೊಂಡಿದ್ದಾರೆ. 12 ವಾಹನಗಳು ಹಾನಿಗೀಡಾಗಿವೆ’ ಎಂದು ಅಫ್ಗಾನಿಸ್ತಾನದ ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

Post Comments (+)