ಶನಿವಾರ, ನವೆಂಬರ್ 23, 2019
17 °C

ಹಾಂಗ್‌ಕಾಂಗ್‌: ಪ್ರತಿಭಟನೆ ಅಶ್ರುವಾಯು, ಜಲಫಿರಂಗಿ

Published:
Updated:
Prajavani

ಹಾಂಗ್‌ಕಾಂಗ್‌: ಹಾಂಗ್‌ಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರ ಪ್ರತಿಭಟನೆ ತೀವ್ರಗೊಂಡಿದ್ದು, ಶನಿವಾರ ಪ್ರತಿಭಟನಾ ನಿರತರ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು, ಜಲಫಿರಂಗಿ ಬಳಸಿದರು. 

ಮುಖಕ್ಕೆ ಕಪ್ಪುಗವಸು ಕಟ್ಟಿಕೊಂಡಿದ್ದ ಪ್ರತಿಭಟನಾಕಾರರು ಸರ್ಕಾರ ಇತ್ತೀಚೆಗೆ ವಿಧಿಸಿದ್ದ ನಿಷೇಧಾಜ್ಞೆಯನ್ನೂ ಉಲ್ಲಂಘಿಸಿ ಇಲ್ಲಿನ  ಪ್ರಮುಖ ಮಾರುಕಟ್ಟೆ ಪ್ರದೇಶವಾಗಿದ್ದ ಕಾಸ್‌ವೇ ಬೇ ಪಟ್ಟಣದಲ್ಲಿ ಸೇರಿದ್ದರು.

ಪ್ರತಿಭಟನೆಯು ಒಂದು ಹಂತದಲ್ಲಿ ಹಿಂಸಾತ್ಮಕ ರೂಪವನ್ನು ತಳೆದಾಗ ಗುಂಪು ಚದುರಿಸಲು ಅಶ್ರುವಾಯು ಸಿಡಿಸಲಾಯಿತು. ಇದರಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದವರ ಮೇಲೆ ಜಲಫಿರಂಗಿಯನ್ನು ಪ್ರಯೋಗಿಸಲಾಯಿತು.

ಘರ್ಷಣೆಯಲ್ಲಿ ಹಲವು ವಾಣಿಜ್ಯ ಮಳಿಗೆಗಳ ಕಿಟಕಿ ಗಾಜುಗಳು ಒಡೆದವು. ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡರು ಎಂದು ‘ಕ್ಸಿನುಹಾ’ ವಾರ್ತಾ ಸಂಸ್ಥೆ ವರದಿ ಮಾಡಿದೆ.

ಹಾಂಗ್‌ಕಾಂಗ್‌ನಲ್ಲಿ ಆಡಳಿತ ವ್ಯವಸ್ಥೆಗೆ ಸವಾಲೊಡ್ಡುವ ಯಾವುದೇ ಬೆಳವಣಿಗೆ ಸಹಿಸುವುದಿಲ್ಲ ಎಂದು ಚೀನಾ ಈಚೆಗೆ ಎಚ್ಚರಿಕೆ ನೀಡಿದ್ದು, ಅದರ ಹಿಂದೆಯೇ ಈ ಬೆಳವಣಿಗೆ ನಡೆದಿದೆ. 22 ವಾರಗಳಿಂದ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)