4

ಸಂಚಲನ ಸೃಷ್ಟಿಸಿದ ಆತ್ಮಹತ್ಯೆ

Published:
Updated:

ಶಾಂಘೈ (ಎಎಫ್‌ಪಿ): ತನ್ನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ದೂರನ್ನು ಕೋರ್ಟ್‌ ವಜಾಗೊಳಿಸಿದ್ದರಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಉಂಟುಮಾಡಿದೆ.

ಲೀ ಯಿವಿ (19) ಎಂಬ ಯುವತಿ 8ನೇ ಮಹಡಿಯಿಂದ ಧುಮುಕಲು ಯತ್ನಿಸುತ್ತಿದ್ದಾಗ, ಭದ್ರತಾ ಸಿಬ್ಬಂದಿ ರಕ್ಷಣೆಗೆ ಮುಂದಾದರು. ಆದರೆ, ಕೆಳಗೆ ನೆರೆದಿದ್ದವರು ‘ಅವರು ಬರುತ್ತಿದ್ದಾರೆ, ಬೇಗ ಧುಮುಕು’ ಎಂದು ಆಕೆಯನ್ನು ಪ್ರಚೋದಿಸುತ್ತಿದ್ದ ವಿಡಿಯೊ ವೈರಲ್‌ ಆಗಿದೆ. ಈ ಪ್ರಕರಣ, ಲೈಂಗಿಕ ದೌರ್ಜನ್ಯಗಳ ವಿರುದ್ಧ ಕಾನೂನು ನೆರವು ಪಡೆಯಲು ಚೀನಾ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆಯೂ ಬೆಳಕು ಚೆಲ್ಲಿದೆ.

2016ರಲ್ಲಿ ಪ್ರೌಢಶಾಲಾ ಶಿಕ್ಷಕ ತನ್ನನ್ನು ಚುಂಬಿಸಿ ಬಟ್ಟೆ ಬಿಚ್ಚಲು ಯತ್ನಿಸಿದ್ದಾಗಿ ಲೀ ದೂರಿದ್ದಳು. ಇದು ಸಣ್ಣ ಕಿರುಕುಳವಾಗಿದ್ದು, ಅಪರಾಧವೇನಲ್ಲ ಎಂದು ಹೇಳಿದ್ದ ಕೋರ್ಟ್‌, ಆತನನ್ನು ಆರೋಪಮುಕ್ತಗೊಳಿಸಿತ್ತು.ಚೀನಾ ವಿಶ್ವವಿದ್ಯಾಲಯದ ಕ್ಯಾಂಪಸ್‌
ಗಳಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು #MeToo ಎಂಬ ಚಳವಳಿಗೂ ದಾರಿ ಮಾಡಿವೆ. ಆದರೆ, ಅಧಿಕಾರಿಗಳ ನಿರ್ಬಂಧದಿಂದಾಗಿ ಈ ಚಳವಳಿ ಹೆಚ್ಚು ಪ್ರಚಾರ ಪಡೆದುಕೊಂಡಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !