ಅಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: ಪ್ರಧಾನಿ ಮೋದಿ ಖಂಡನೆ

7
ಸಿಖ್‌, ಹಿಂದೂಗಳು ಸೇರಿ 19 ಮಂದಿ ಸಾವು

ಅಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: ಪ್ರಧಾನಿ ಮೋದಿ ಖಂಡನೆ

Published:
Updated:
ಆಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆದ ಸ್ಥಳ 

ಕಾಬೂಲ್‌: ಅಫ್ಗಾನಿಸ್ತಾನದ ಜಲಾಲಾಬಾದ್‌ನಲ್ಲಿ ಸಿಖ್‌ ಮತ್ತು ಹಿಂದೂಗಳನ್ನು ಗುರಿಯಾಗಿಸಿಕೊಂಡ ನಡೆದ ಆತ್ಮಾಹುತಿ ಬಾಂಬ್‌ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.

’ನೆನ್ನೆ ಆಫ್ಗಾನಿಸ್ತಾನದಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಆಫ್ಗಾನಿಸ್ತಾನದ ಬಹುಸಂಸ್ಕೃತಿಯ ಮೇಲೆ ನಡೆಸಿರುವ ದಾಳಿ ಇದಾಗಿದೆ. ಭಾರತವು ಅಫ್ಗಾನಿಸ್ತಾನಕ್ಕೆ ಸಹಕಾರ ನೀಡಲು ಸಿದ್ಧವಿದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ.’ ಎಂದು ಪ್ರಧಾನಿ ಟ್ವೀಟಿಸಿದ್ದಾರೆ. 

‌ಅಧ್ಯಕ್ಷರ ಅಶ್ರಫ್‌ ಘನಿ ಭೇಟಿ ನಿಗದಿಯಾಗಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಭಾನುವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದು, ಮೃತರಲ್ಲಿ 12 ಮಂದಿ ಸಿಖ್‌ ಹಾಗೂ ಹಿಂದೂಗಳಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಅಫ್ಗಾನಿಸ್ತಾನದಲ್ಲಿರುವ ಸಿಖ್‌ ಮತ್ತು ಹಿಂದೂಗಳ ಸಂಖ್ಯೆ ಸುಮಾರು 1000. ಇಸ್ಲಾಮಿಕ್‌ ಮೂಲಭೂತವಾದಿಗಳು ಈ ಹಿಂದೆಯೂ ಅಲ್ಲಿನ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. 

ಸಿಖ್‌ ಮುಖಂಡ ಅವತಾರ್‌ ಸಿಂಗ್‌ ಖಾಲ್ಸಾ ಸೇರಿ ಮೃತಪಟ್ಟ 12 ಮಂದಿ ಸಿಖ್‌ ಸಮುದಾಯದವರ ಪೈಕಿ 11 ಜನರ ಪಟ್ಟಿ ಬಿಡುಗಡೆಯಾಗಿದೆ. ಮೃತರ ಸಂಬಂಧಿಗಳನ್ನು ಸೋಮವಾರ ಸಂಜೆ ಭೇಟಿ ಮಾಡುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !