ಗುಹೆಯಿಂದ 8 ಬಾಲಕರ ರಕ್ಷಣೆ: ಹೊರ ಬರುವ ನಿರೀಕ್ಷೆಯಲ್ಲಿ 5 ಜನ

7
ಫಿಫಾ ಫೈನಲ್‌ ಪಂದ್ಯ ವೀಕ್ಷಣೆಗೆ ಗುಹೆಯೊಳಗೆ ಸಿಲುಕಿರುವ ಬಾಲಕರಿಗೆ ಆಹ್ವಾನ: ಭಾನುವಾರದೊಳಗೆ ಹೊರಗೆ ಬರುವರೇ?

ಗುಹೆಯಿಂದ 8 ಬಾಲಕರ ರಕ್ಷಣೆ: ಹೊರ ಬರುವ ನಿರೀಕ್ಷೆಯಲ್ಲಿ 5 ಜನ

Published:
Updated:
ಥಾಯ್ಲೆಂಡ್‌ ಗುಹೆಯೊಳಗೆ ರಕ್ಷಣಾ ಕಾರ್ಯ

ಮಾ ಸೈ( ಥಾಯ್ಲೆಂಡ್‌): ಪ್ರವಾಹದಿಂದ ಥಾಮ್‌ ಲುವಾಂಗ್‌ ಗುಹೆಯಲ್ಲಿ ಎರಡು ವಾರಗಳಿಂದ ಸಿಲುಕಿರುವ ಫುಟ್‌ಬಾಲ್‌ ತಂಡದ ಸದಸ್ಯರ ರಕ್ಷಣೆಗೆ 90 ಮುಳುಗು ತಜ್ಞರು ನಿರಂತರ ಪ್ರಯತ್ನ ನಡೆಸಿದ್ದು, ಮಳೆಯಿಂದಾಗಿ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಸೋಮವಾರ ನಾಲ್ವರು ಬಾಲಕರನ್ನು ಹೊರಗೆ ಕರೆತರುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.

ಗುಹೆಯಲ್ಲಿ ಸಿಲುಕಿರುವ ಥಾಯ್ಲೆಂಡ್‌ ಫುಟ್‌ಬಾಲ್ ತಂಡದ ಸದಸ್ಯರನ್ನು ಫುಟ್‌ಬಾಲ್‌ ವಿಶ್ವಕಪ್‌ ಫೈನಲ್‌ ಪಂದ್ಯ ವೀಕ್ಷಣೆಗೆ ’ಫಿಫಾ’ ಆಡಳಿತ ಮಂಡಳಿಯ ಆಹ್ವಾನಿಸಿದೆ. ಮಾಸ್ಕೊದಲ್ಲಿ ಭಾನುವಾರ ವಿಶ್ವಕಪ್‌ ಫೈನಲ್‌ ಹಣಾಹಣಿ ನಡೆಯಲಿದ್ದು, ಅಷ್ಟರಲ್ಲಿ ಎಲ್ಲ ಸದಸ್ಯರು ಹೊರಗೆ ಬರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ. 

ಫಿಫಾ ಅಧ್ಯಕ್ಷ ಮೂರು ದಿನಗಳ ಹಿಂದೆ ಥಾಯ್‌ ಫುಟ್‌ಬಾಲ್‌ ಅಸೋಸಿಯೇಷನ್‌ಗೆ ಬರೆದ ಪತ್ರದಲ್ಲಿ ಗುಹೆಯಲ್ಲಿ ಸಿಲುಕಿರುವವರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಜು.15ರೊಳಗೆ ಆ ಎಲ್ಲ ಸದಸ್ಯರು ಹೊರಬಂದು, ಪ್ರಯಾಣಿಸಲು ಸಾಧ್ಯವಾಗುವುದಾದರೆ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಅವರನ್ನು ನಮ್ಮ ಅತಿಥಿಗಳಾಗಿ ಆಹ್ವಾನಿಸಲು ಹರ್ಷಿಸುತ್ತೇನೆ ಎಂದಿದ್ದಾರೆ.

ಜೂನ್‌ 23ರಂದು 11ರಿಂದ 16 ವರ್ಷದ ಒಳಗಿನ ಫುಟ್‌ಬಾಲ್‌ ತಂಡದ 12 ಬಾಲಕರು ಮತ್ತು 25 ವರ್ಷದ ತರಬೇತುದಾರ ಮ್ಯಾನ್ಮಾರ್‌ ಗಡಿಯಲ್ಲಿರುವ ಈ ಗುಹೆ ಒಳಗೆ ತೆರಳಿದ್ದಾಗ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಸಿಲುಕಿಕೊಂಡಿದ್ದರು. ಈ ಘಟನೆ ವಿಶ್ವದ ಗಮನಸೆಳೆದಿತ್ತು.

ಕಳೆದ ಸೋಮವಾರ ಬ್ರಿಟಿಷ್‌ ಮುಳುಗು ತಜ್ಞರಾದ ರಿಚರ್ಡ್‌ ಸ್ಟಾಂಟನ್‌ ಮತ್ತು ಜಾನ್‌ ವೊಲಾಂಥೆನ್‌ ಪುಟ್‌ಬಾಲ್‌ ತಂಡದ ಸದಸ್ಯರನ್ನು ಪತ್ತೆ ಮಾಡಿದ್ದರು.

ಭಾನುವಾರ(ಜು.8) ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಬಾಲಕರನ್ನು ರಕ್ಷಿಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಸಹ ನಾಲ್ವರು ಬಾಲಕರನ್ನು ಹೊರಗೆ ಕರೆತರಲಾಗಿದ್ದು, ಇನ್ನೂ ಐದು ಮಂದಿ ಹೊರ ಬರುವ ನಿರೀಕ್ಷೆಯಲ್ಲಿದ್ದಾರೆ. 

ಸೋಂಕಿನ ಭಯ!

ಈಗಾಗಲೇ ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ವಿವರಗಳನ್ನು ರಕ್ಷಣಾ ತಂಡ ಬಹಿರಂಗ ಪಡಿಸಿಲ್ಲ. ಹೊರಗೆ ಕರೆತರಲಾಗಿದೆ ಬಾಲಕರ ಬಗ್ಗೆ ಪೋಷಕರಿಗೂ ಯಾವುದೇ ಮಾಹಿತಿ ನೀಡಿಲ್ಲ. ವರದಿಗಳ ಪ್ರಕಾರ, ಗುಹೆಯಲ್ಲಿ ದೀರ್ಘಕಾಲದ ವರೆಗೂ ಉಳಿದಿದ್ದ ಮಕ್ಕಳು ಶ್ವಾಸಕೋಶ ಸೋಂಕು, ಬಾವಲಿ ಹಾಗೂ ಇತರ ಪಕ್ಷಿಗಳಿಂದ ಉಂಟಾಗಿರಬಹುದಾದ ಸೋಂಕಿನ ಕುರಿತು 48 ಗಂಟೆ ನಿಗಾವಹಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !